ಹೊನ್ನಾವರ : ರಾಮನವಮಿ ದಿವಸ ಹೊನ್ನಾವರ ಜಾತ್ರೆಗೆ ಹೋಗುತ್ತೇನೆ ಎಂದು ಮನೆಯಿಂದ ಹೋಗಿದ್ದ ಯುವಕ ಗೋವಾದ ಬೀಚ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಗರೆ ಮಾರಿಮನೆಯ 21 ವರ್ಷದ ಗಗನ್ ರವಿ ನಾಯ್ಕ ಎಂಬಾತನೇ ಸಾವಿಗೀಡಾದ ಯುವಕ.

ಅತ ಮೂರು ಜನ ಸ್ನೇಹಿತರೊಂದಿಗೆ ಮನೆಗೆ ತಿಳಿಸದೆ ಗೋವಾಗೆ ಹೋಗಿದ್ದ ಎನ್ನಲಾಗುತ್ತಿದೆ. ಮನೆಗೆ ಬಾರದ ಮಗನನ್ನು ಮನೆಯವರು ಹುಡುಕಿ ಹೋದಾಗ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ. ಗೋವಾ ಬಾದ್ ಮೋಲ್ ಬೀಚ್ ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದಾನೆ.

RELATED ARTICLES  ಅಕ್ರಮ ಶ್ರೀಗಂಧ ಸಾಗಾಟ, ಓರ್ವ ಅರೆಸ್ಟ್

ಗೋವಾ ಹೋದ ಮೇಲೆ ಬೇರೊಂದು ನಂಬರ್ ನಿಂದ ಮನೆಗೆ ಕಾಲ್ ಮಾಡಿ ಸಂಬಂಧಿಕರ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾನೆ ಎಂದು ಸುದ್ದಿ ಕೇಳಿ ಬಂದಿದೆ. ಜೊತೆಗಿದ್ದ ಸ್ನೇಹಿತರು ವಾಪಾಸ್ ಬಂದರು ಈತ ಗೋವಾದಲ್ಲೇ ಇದ್ದ ಎಂದು ಸ್ನೇಹಿತರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES  4 ವರ್ಷದ ಬಾಲಕಿಯ ಅತ್ಯಾಚಾರ ಯತ್ನ : ಪ್ರಕರಣ ದಾಖಲು.

ಹುಡುಗನ ಸಾವಿಗೆ ಕಾರಣವೇನು? ಎಂಬುದು ಮಾತ್ರ ನಿಘೂಡವಾಗಿದೆ. ಪೊಲೀಸ್ ತನಿಖೆ ನಂತರ ನಿಜಾಂಶ ತಿಳಿಯಬಹುದು ಎನ್ನಲಾಗಿದೆ.