ಕುಮಟಾ : ನಗರದ ರಾಷ್ಟ್ರೀಯ ಹೆದ್ದಾರಿ 66 ರ ಕೆ.ಎಸ್.ಆರ್.ಟಿ.ಸಿ ಬಸ್, ನಿಲ್ದಾಣದ ಎದುರು, ಮೀನುಗಳನ್ನು ತುಂಬಿಕೊಂಡು ಹೋಗುವ ವಾಹನದಲ್ಲಿ ಅಕ್ರಮ ಗೋ ಮಾಂಸ ತುಂಬಿಕೊಂಡು ಹೋಗುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿ ಯಾದ ಘಟನೆ ನಡೆದಿದೆ.

RELATED ARTICLES  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ಸಂಘದ 17 ಸದಸ್ಯರೂ ಅವಿರೋಧ ಆಯ್ಕೆ.

ಅಪಘಾತ ಪಡಿಸಿ ವಾಹನ ಚಾಲಕ ಪರಾರಿಯಾಗಿದ್ದು ಮೀನಿನ ವಾಹನದಲ್ಲಿ 923 ಕೆ.ಜಿ ದನದ ಮಾಂಸ ಪತ್ತೆಯಾಗಿದೆ. ಶಿರಸಿ ಯಿಂದ ಕುಮಟಾ ಮಾರ್ಗವಾಗಿ ಮಂಗಳೂರು ಕಡೆ ತೆರಳುತಿದ್ದ ದನದ ಮಾಂಸ ತುಂಬಿದ್ದ ವಾಹನ ಇದಾಗಿದ್ದು ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಲಾಗುತಿತ್ತು.

RELATED ARTICLES  ಕುಮಟಾ ಪುರಸಭೆಯ ಸಾಮಾನ್ಯ ಸಭೆ : ಹಲವು ವಿಷಯ ಚರ್ಚೆ

ಸ್ಥಳಕ್ಕೆ ಕುಮಟಾ ಪಿ.ಎಸ್.ಐ ಸಂಪತ್ತ ಕುಮಾರ್ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾದಲ್ಲಿ ಪ್ರಕರಣ ದಾಖಲಾಗಿದೆ.