ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವ ನಾರಾಯಣ್ ಅವರಿಗೆ ಮತ್ತೊಂದು ಬರಸಿಡಿಲು ಬಂದಪ್ಪಳಿಸಿದೆ. ಕೆಲ ದಿನಗಳ ಹಿಂದಷ್ಟೇ ತಮ್ಮ ತಂದೆ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಧ್ರುವನಾರಾಯಣ್ ಅವರನ್ನು ಕಳೆದುಕೊಂಡು ನೋವಲ್ಲಿದ್ದ ದರ್ಶನ್‌ ಅವರು ಇದೀಗ ತಮ್ಮ ತಾಯಿಯನ್ನೂ ಕಳೆದುಕೊಂಡಿದ್ದಾರೆ.

ದರ್ಶನ್ ಧ್ರುವ ನಾರಾಯಣ್ ಅವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮಾಜಿ ಸಂಸದ, ದಿವಂಗತ ಧ್ರುವ ನಾರಾಯಣ್ ಅವರ ಪತ್ನಿ ವೀಣಾ ಧ್ರುವ ನಾರಾಯಣ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ತಮ್ಮ ಗಂಡನನ್ನು ಕಳೆದುಕೊಂಡು ಅಕ್ಷರಶಃ ಕುಗ್ಗಿ ಹೋಗಿದ್ದರು. ಅದೇ ನೋವಲ್ಲಿದ್ದ ಅವರು ಕೆಲವೇ ದಿನಗಳ ಅಂತರದಲ್ಲಿ ತಾವೂ ಇಹಲೋಕ ತ್ಯಜಿಸಿದ್ದಾರೆ.

RELATED ARTICLES  ಕುಮಟಾ, ಹೊನ್ನಾವರ, ಅಂಕೋಲಾದಲ್ಲಿ ನಾಳಿನ ಕೊರೋನಾ ಲಸಿಕಾ ಮಾಹಿತಿ

ಕಳೆದ ತಿಂಗಳಷ್ಟೇ ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಕಳೆದ 2 ವರ್ಷಗಳಿಂದ ಧ್ರುವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇವರು 2 ಬಾರಿ ಶಾಸಕರಾಗಿ 1 ಬಾರಿ ಸಂಸದರಾಗಿದ್ದರು.

RELATED ARTICLES  ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ:ದೇಶದಲ್ಲಿ ಮೂರು ಲಕ್ಷ ಕಾಮನ್ ಸರ್ವಿಸ್ ಸೆಂಟರ್ ಮೂಲಕ ಎಲ್ ಪಿಜಿ ಸೇವೆ.