ಹಳಿಯಾಳ : ತಾಲೂಕಿನ ಅರ್ಲವಾಡ ಚೆಕ್ ಪೋಸ್ಟ್’ನಲ್ಲಿ ದಾಖಲೆ ಇಲ್ಲದ 17 ಲಕ್ಷ ರೂಪಾಯಿ ವಶಕ್ಕೆ ಪಡೆದ ಘಟನೆ ನಡೆದಿದೆ. ಹಳಿಯಾಳ ತಾಲೂಕಿನ ಅರ್ಲವಾಡ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುವ ಸಮಯದಲ್ಲಿ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಪಿ ಎಸ್ ಐ ಅಮೀನ್ ಅತ್ತಾರವರ ಸಿಬ್ಬಂದಿಗಳಾದ ಹಾನಿಫ್, ಕಾಸಿ ಹಾಗೂ ಎಸ್ ಎಸ್ ಟಿ ತಂಡದ ದರ್ಶನ ಅವರು ದಾಳಿಯನ್ನು ನಡೆಸಿದ್ದರು. ಘಟನಾ ಸ್ಥಳಕ್ಕೆ ಚುನಾವಣಾ ಅಧಿಕಾರಿ ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಎರಡನೇ ದಿನ ಸಂಪನ್ನ: ಸಂಘಟಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು.