ಮುಂಡಗೋಡ: ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಟಿಬೇಟಿಯನ್ ಕ್ಯಾಂಪ್ ನಂಬರ್ 2 ರ ಕುಸೂರು ಕ್ರಾಸ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ 410 ಗ್ರಾಂ ಗಾಂಜಾ ಹಾಗೂ ಸ್ಕೂಟಿ ವಶ ಪಡಿಸಿಕೊಳ್ಳಲಾಗಿದೆ.

RELATED ARTICLES  ದೇವಾಲಯಗಳಿಗೆ ಆಡಳಿತ ಸಮಿತಿ ರಚನೆ ಕೈ ಬಿಡಲು ಮನವಿ.

ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿದ ಮುಂಡಗೋಡ ಪೊಲೀಸರು, ಮುಂಡಗೋಡ ಯಲ್ಲಾಪುರ ರಸ್ತೆಯ ಬ್ಲ್ಯೂ ಹಿಲ್ ಹೊಟೇಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಉತ್ತರ ಪ್ರದೇಶ ಮೂಲದ ಆರ್ಯನ್ ಅಲಿಯಾಸ್ ಅಮರೀಶ್ ಕುಮಾರ್ ಹಾಗೂ ಭಟ್ಕಳ ಮೂಲದ ಮಹ್ಮದ ಅಲಿ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ಪೂ ಶ್ರೀ ಶ್ರೀ ವಾಸುದೇವಾನಂದ ಬ್ರಹ್ಮಾನಂದ ಭೂತಿ ಮಹಾಸ್ವಾಮೀಜಿಯವರಿಗೆ ಗೋಕರ್ಣ ಗೌರವ

ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಕ್ರೈಂ ಪಿಎಸ್ ಐ ಎನ್.ಡಿ. ಜಕ್ಕಣ್ಣನವರ್, ಪಿಎಸ್‌ಐ ಯಲ್ಲಾಲಿಂಗ ಕುನ್ನೂರು, ಸಿಬ್ಬಂದಿಗಳಾದ ಅನ್ವರ್ ಖಾನ್, ಕೊಟೇಶ್ ನಾಗರಳ್ಳಿ, ಅಣ್ಣಪ್ಪ ಬುಡಗೇರ, ಮಹಾಂತೇಶ್ ಮುದೋಳ್, ಸಂಜು ರಾಠೋಡ್, ಗಿರೀಶ್ ಹಾಗೂ ಶರತ್ ದಾಳಿಯಲ್ಲಿ ಭಾಗಿಯಾಗಿದ್ದರು.