ಶಿರಸಿ : ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಅಪಘಾತವಾಗಿದೆ ಎಂದು ವರದಿಯಾಗಿದ್ದು ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರಕ್ಕೆಂದು ಆಗಮಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಹಾಗೂ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.

RELATED ARTICLES  ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

ಅಪಘಾತದ ಕಾರಣಕ್ಕೆ ಓರ್ವನಿಗೆ ತೀವ್ರ ಗಾಯವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಕಾರವಾರ ನಗರಸಭಾ ಸದಸ್ಯ ಉಲ್ಲಾಸ್ ಕಿಣಿ, ಸಂದೇಶ ಶೆಟ್ಟಿ, ವಿ.ಎಂ ಹೆಗಡೆ, ಪ್ರದೀಪ್ ಗುನಗಿ, ಗಜಾನನ ರೇವಣ್ಕರ್ ಎಂದು ಗುರುತಿಸಲಾಗಿದೆ.

RELATED ARTICLES  ಅವಲೋಕನ ಪುಸ್ತಕಕ್ಕೆ ರಾಘವೇಶ್ವರ ಶ್ರೀಗಳಿಂದ ದಿವ್ಯಾಶೀರ್ವಾದ.