ಅಂಕೋಲಾ : ವಿಧಾನಸಭೆ ಚುನಾವಣೆಯ ಹಿನ್ನೆಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು ಮತ್ತು ಪೊಲೀಸರು ಪಟ್ಟಣದಲ್ಲಿ ಸಶಸ್ತ್ರಧಾರಿಗಳಾಗಿ ಪಥಸಂಚಲನ ನಡೆಸಿದರು. ಪೊಲೀಸ್ ಠಾಣೆಯಿಂದ ಹೊರಟ ಪಥಸಂಚಲನ ಕಾರವಾರ ರಸ್ತೆ ಮೂಲಕ ಪಟ್ಟಣದ ಮುಖ್ಯ ರಸ್ತೆ ಬೆಂಡಿಬಜಾರ ಕಿತ್ತೂರು ಚೆನ್ನಮ್ಮ ರಸ್ತೆಯಿಂದ ಮರಳಿ ಪೊಲೀಸ ಠಾಣೆಗೆ ಆಗಮಿಸಿತು. ಠಾಣೆಯ ಸಿಪಿಐ ಜಾಕ್ಷನ್ ಡಿಸೋಜಾ, ಪಿಎಸ್‌ಐಗಳಾದ ಪ್ರೇಮನಗೌಡ ಪಾಟೀಲ, ಮಹಾಂತೇಶ ಬಿ.ವಿ. ಈ ವೇಳೆ ಪಾಲ್ಗೊಂಡಿದ್ದರು.

RELATED ARTICLES  ಅಪೂರ್ಣವಾಗಿದೆ ಗಂಗಾವಳಿ ಸೇತುವೆ ಕಾಮಗಾರಿ : ಗ್ರಾಮಸ್ಥರ ಆಕ್ಷೇಪ.

ತಾಲೂಕಿನಲ್ಲಿ ಯಾವುದೆ ದೊಂಬಿ ಗಲಾಟೆಗಳಿಲ್ಲದೆ ಸುಗಮ ಮತ್ತು ಶಾಂತ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯೋಧರನ್ನು ಕರೆಯಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿಯೂ
ಕಾರ್ಯನಿರ್ವಹಿಸಲಿದ್ದಾರೆ.

RELATED ARTICLES  ನವೆಂಬರ್ 24 ಭಾನುವಾರ ಮಧ್ಯಾಹ್ನ 3.30 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.