ಹೊನ್ನಾವರ : ತಾಲೂಕಿನ‌ ಮಂಕಿ ಬಳಿ ಬಾವಿಯೊಂದರಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಿಸಿದ್ದಾರೆ. ಸುಮಾರು 15 ಅಡಿ ಆಳ 10 ಅಡಿ ನೀರಿರುವ ತೆರೆದ ಬಾವಿಯಲ್ಲಿ ಬಿದ್ದಿರುವ
ಆಕಳನ್ನು ಹಗ್ಗ ಮತ್ತು ಇತರೆ ಸುರಕ್ಷಿತ ಸಲಕರಣೆ ಬಳಸಿ ರಕ್ಷಣೆ ಮಾಡಲಾಗಿದೆ.

RELATED ARTICLES  ರಾಜ್ಯ ಪುರಸ್ಕಾರ ಪಡೆದ ಕುಮಟಾ ಪ್ರತಿಭಾನ್ವಿತ ವಿದ್ಯಾರ್ಥಿ ಭಾಸ್ಕರ ಈಶ್ವರ ಮರಾಠಿ

ಜನರ ಸಹಕಾರದಲ್ಲಿ ಅಗ್ನಿಶಾಮಕ
ಸಿಬ್ಬಂದಿ ಆಕಳನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಕಾರ್ಯಚರಣೆಯಲ್ಲಿ ಜಯಾನಂದ ಪಟಗಾರ ಹಾಗೂ ಅಗ್ನಿಶಾಮಕ ಸಿಬ್ಬಂದಿ
ನಾಗೇಶ ಪೂಜಾರಿ, ಬಸವರಾಜ ಮಂಗೋಜಿ, ವಿನಾಯಕ ಭಂಡಾರಿ, ಅಭಿಷೇಕ ನಾಯ್ಕ, ವಿಶ್ವಾಸ ಎಸ್. ಹಾಗೂ ರಾಜು ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES  ಕುಮಟಾದಲ್ಲಿ ಬಿಜೆಪಿ ತೆಕ್ಕೆಗೆ ಪುರ‌ಸಭೆ: ಜಿದ್ದಾ ಜಿದ್ದಿನ ಹೋರಾಟದ ಫಲಿತಾಂಶ ಪ್ರಕಟ