ಶಿರಸಿ : ಏ 7 ರಂದು ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಅಪಘಾತವಾಗಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಿತೀನ್ ರಾಯ್ಕರ್ ಕೊನೆಯುಸಿರೆಳೆದಿರುವ ಬಗ್ಗೆ ವರದಿಯಾಗಿದೆ. ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರಕ್ಕೆಂದು ಆಗಮಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು, ನಿತಿನ್ ರಾಯ್ಕರ್ ಜೊತೆಗೆ ಕಾರ್ಯದಲ್ಲಿ ಇದ್ದ ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು ಆದರೆ ನಿತಿನ್ ರಾಯ್ಕರ್ ಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು.

RELATED ARTICLES  ಅತಿ ವೇಗ ತಂದ ಅವಾಂತರ: ಹಾರಿತು ಯುವಕನ ಪ್ರಾಣ

ಕಾರವಾರದಲ್ಲಿ ನ್ಯಾಯವಾದಿಯಾಗಿದ್ದ ನಿತಿನ್ ಬಿಜೆಪಿಯ ಕಾನೂನು ಸಲಹೆಗಾರರಾಗಿದ್ದರು. ಅವರು ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರಕ್ಕೆ ತೆರಳಿ ಇನೋವಾ ಕಾರಿನಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು. ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದ ಬಗ್ಗೆ ಸ್ಥಳೀಯ ಸುದ್ದಿ ಪತ್ರಿಕೆ ವರದಿ ಮಾಡಿದೆ.

RELATED ARTICLES  ಆತ್ಮಹತ್ಯೆಗೆ ಶರಣಾದ ಯುವಕ