ಕುಮಟಾ : ಅನೇಕ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಸ್ವಚ್ಚತೆಯೇ ಆರೋಗ್ಯ ಎನ್ನುವ ಘೋಷವಾಕ್ಯದಡಿಯಲ್ಲಿ ಪ್ರತೀವಾರ ಸ್ವಚ್ಛತಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಅದರಂತೆ ರವಿವಾರ ಪಟ್ಟಣದ ಗಿಬ್ ಸರ್ಕಲ್ ಹತ್ತಿರದ ಬಸ್ ತಂಗುದಾಣ ಸುತ್ತಲು ಸ್ವಚ್ಚ ಮಾಡಿ ತಂಗುದಾಣಕ್ಕೆ ಸುಣ್ಣ ಬಣ್ಣ ಬಳಿಯಲಾಯಿತು.
ಸಿದ್ದಾಪುರ, ಚಂದಾವರ, ಕೂಜಳ್ಳಿ ಮುಂತಾದ ಕಡೆಗಳಲ್ಲಿ ಸಾಗುವ ಸವಾರರು ತಂಗುವ ಈ ಬಸ್ ತಂಗುದಾಣವು ಅನೇಕ ದಿನಗಳಿಂದ ಬಣ್ಣ ಮಾಸಿದ ಸ್ಥಿತಿಯಲ್ಲಿತ್ತು. ಇದೀಗ ಯುವಾ ಬ್ರಿಗೇಡ್ ಕುಮಟಾ ಕಾರ್ಯಕರ್ತರು ಸೇರಿ ಸ್ವಚ್ಚ ಮಾಡಿ ಬಣ್ಣ ಬಳಿಯುವುದರ ಮೂಲಕ ಆಕರ್ಷಕವಾಗಿಸಿದರು. ಯುವಾ ಬ್ರಿಗೇಡ್ ಕುಮಟಾ ತಂಡದ ಕಾರ್ಯದ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಒಂದೊಂದು ವಾರದಂತೆ ಹೆಗಡೆ ಕ್ರಾಸ್, ಮೂರುರ್ ಕ್ರಾಸ್, ಉಂಚಗಿ, ತಲಗೇರಿ, ಗಿಬ್ ಸರ್ಕಲ್, ಹೊನ್ಮಾಂವ್, ಗೋರ ಕ್ರಾಸ್, ಹೆಗಲೆ ಕ್ರಾಸ್, ಹೆಗಡೆಗಳ ಬಸ್ ತಂಗುದಾಣವನ್ನೂ ಇದೇ ರೀತಿ ಸ್ವಚ್ಚಗೊಳಿಸಿ ಬಣ್ಣ ಬಳಿದಿದ್ದ ಯುವಾ ಬ್ರಿಗೇಡ್ ಕಾರ್ಯ ಸ್ಮರಣೀಯವಾಗಿದೆ.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ತಾಲೂಕಾ ಸಂಚಾಲಕ ಪ್ರಕಾಶ ನಾಯ್ಕ, ಜಿಲ್ಲಾ ಸಂಚಾಲಕ ಸತೀಶ ಪಟಗಾರ, ಸದಸ್ಯರಾದ ಬಬ್ಲು, ಗಿರೀಶ ಪಟಗಾರ, ರಾಘವೇಂದ್ರ ಗಾಡಿಗ, ಮಾರುತಿ ಪಟಗಾರ, ಚಿದಂಬರ ಅಂಬಿಗ, ಸಚೀನ ಭಂಡಾರಿ, ಸಂದೀಪ ಮಡಿವಾಳ, ರವೀಶ ನಾಯ್ಕ, ಕಿರಣ ಕಡೆಮನೆ, ಅಣ್ಣಪ್ಪ ನಾಯ್ಕ ಇದ್ದರು.