ಕಾರವಾರ: ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯೆ ಆಗಿರುವ ಕಾರವಾರ ಅಂಕೋಲಾ ಕ್ಷೇತ್ರದ ನಿಷ್ಠಾವಂತೆ ಧುರೀಣೆ, ರೂಪಾಲಿ ನಾಯ್ಕ ಅವರಿಗೆ ರಾಜ್ಯ ಬಿಜೆಪಿ ನಾಯಕರು, ಉತ್ತರಕನ್ನಡ ಜಿಲ್ಲೆಯ ಮಹಿಳಾ ಮೋರ್ಚಾದ ಸಂಘಟನೆಯ ಹೊಣೆಗಾರಿಕೆ ನೀಡುವ ಮೂಲಕ ಪದೋನ್ನತಿ ನೀಡಿದ್ದಾರೆ.
ಪಕ್ಷದ ಬಲವರ್ಧನೆಗೆ ಹಗಲಿರುಳು ಶ್ರಮಿಸುತ್ತಿರುವ ರೂಪಾಲಿ ನಾಯ್ಕ ಅವರನ್ನು ರಾಜ್ಯದ ನಾಯಕರು ಹಾಗೂ ಪಕ್ಷದ ಹಿರಿಯ ಮುಖಂಡರು ಮೆಚ್ಚಿಕೊಂಡಿದ್ದು. ಅವರ ಪರಿಶ್ರಮಕ್ಕೆ ತಕ್ಕ ಹುದ್ದೆ ಕೊಡುವ ಮೂಲಕ ಕಾರವಾರ ರಾಜಕಾರಣದಲ್ಲಿ ಕಾಂಗ್ರೇಸ್ ಮತ್ತು ಇತರ ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನಾಗಿ ರೂಪಾಲಿ ನಾಯ್ಕ ಅವರನ್ನು ಬಿಂಬಿಸುತ್ತಿದ್ದಾರೆಂದೇ ವಿಷ್ಲೇಶಿಸಲಾಗುತ್ತಿದೆ.
ಕಾರವಾರ, ಅಂಕೋಲಾ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಿಜೆಪಿ ದಿನವೂ ತನ್ನ ಶಕ್ತಿ ವೃದ್ಧಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾಲಿ ಶಾಸಕ ಸೈಲ್ ಕಾಂಗ್ರೇಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದು, ಅಲ್ಲಿಯೇ ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿಮಾಡಿಕೊಳ್ಳುವಲ್ಲಿ ಹೆಣಗಾಡುತ್ತಿದ್ದಾರೆ. ರಾಜಕೀಯವಾಗಿ ತನ್ನ ಭವಿಷ್ಯವನ್ನು ತಾನೆ ಕೊನೆಗೊಣಿಸಿಕೊಂಡ ಅಸ್ನೋಟಿಕರ್ ಉದ್ಯಮ ಮಾತ್ರ ಉಳಿಸಿಕೊಳ್ಳಲ್ಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ, ಗುತ್ತಿಗೆದಾರರಾದ ಅಂಕೋಲಾದ ಮಂಜುನಾಥ ನಾಯ್ಕ ಜೆಡಿಎಸ್ ಅಭ್ಯರ್ಥಿ ಯಾಗಿ ಕಣಕ್ಕಿಳಿಯಲು ತಯಾರಿನಡೆಸಿದ್ದಾರೆ.