ಕುಮಟಾ: ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಮಕ್ಕಳು ಇಂದು ಮೊಬೈಲ್ ದಾಸರಾಗಿದ್ದಾರೆ. ಆನ್ ಲೈನ್ ಗೇಮ್ ನ ಅಬ್ಬರದಲ್ಲಿ ನಮ್ಮ ಪಾರಂಪರಿಕ ಆಟಗಳು ಮರೆಯಾಗುತ್ತಿವೆ. ಹಿತ ಯಾವುದು ಅಹಿತ ಯಾವುದುಎಂಬ ಅರಿವು ಮೂಡಿಸುವ ಕಾರ್ಯ ಇಂದು ಆಗಬೇಕಿದೆ ಮಕ್ಕಳು ಕ್ರೀಡಾಂಗಣಕ್ಕೆ ಮರಳಬೇಕಿದೆ ಎಂದು ರವೀಂದ್ರ ಭಟ್ಟ ಸೂರಿ ನುಡಿದರು. ಅವರು ಕುಮಟಾ ವಿಕಾಸ ವೇದಿಕೆ ಏರ್ಪಡಿಸಿದ್ದ ಕ್ರೀಡಾ ಶಿಬಿರದಲ್ಲಿ ಉಪನ್ಯಾಸ ನೀಡಿದರು. ಮಕ್ಕಳ ಜೊತೆ ಪಾಲಕರಿಗೂ ಅರಿವು ಮೂಡಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಕುಮಟಾ ವಿಕಾಸ ವೇದಿಕೆ ಆ ಕಾರ್ಯ ಮಾಡಲಿ. ನಾವೆಲ್ಲ ಅದನ್ನು ಬೆಂಬಲಿಸುತ್ತೇವೆ ಅಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಹಿರಿಯ ಪೋಲೀಸ್ ಅಧಿಕಾರಿ ಎನ್.ಟಿ.ಪ್ರಮೋದರಾವ್ ನಾವು ಪರಸ್ಪರ ಒಂದುಗೂಡುವ ಅಗತ್ಯವಿದೆ. ಇಂದಿನ ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ಪಾಲಕರು ಹಾಗೂ ಶಿಕ್ಷಕರು ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ದತ್ತಾತ್ರೇಯ ಭಟ್ಟರವರ ಪ್ರಯತ್ನ ಶ್ಲಾಘನೀಯ ಎಂದರು.
ಪ್ರಗತಿ ವಿದ್ಯಾಲಯ ಮೂರೂರಿನ ಎಮ್.ಆಯ್.ಭಟ್ಟ. ಉಪಸ್ಥಿತರಿದ್ದು ಮಕ್ಕಳಿಗೆ ಮನರಂಜನಾ ಆಟಗಳನ್ನುಪರಿಚಯಿಸಿ ಆಡಿಸಿದರು. ಕುಮಟಾ ವಿಕಾಸ ವೇದಿಕೆಯ ದತ್ತಾತ್ರೇಯ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.