ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಭಟ್ಕಳ, ಹೊನ್ನಾವರ, ಹಾಗೂ ಕುಮಟಾ ಗಳಲ್ಲಿ ಶ್ರೀನಿವಾಸ ಇ ವೇಹಿಕಲ್ಸ್‌ ಹೆಸರಿನಲ್ಲಿ ಪ್ಯೂರ್ ಇವಿ ಕಂಪನಿಯ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ತೊಡಗಿರುವ ಗಣೇಶ ನಾಯ್ಕ ಅವರು, ಎರಡು ವರ್ಷಗಳಲ್ಲಿ 250ಕ್ಕೂ ಹೆಚ್ಚು ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಗಳನ್ನು ಮಾರಾಟ ಮಾಡಿದ್ದಲ್ಲದೇ, ಅತ್ಯುತ್ತಮವಾದ ಆಫ್ಟರ್ ಸೇಲ್ಸ್ ಸರ್ವಿಸ್ ಅನ್ನು ನೀಡಿ ಯಶಸ್ವಿಯಾಗಿ ಉದ್ಯಮವನ್ನು ನಡೆಸಿಕೊಂಡು ಬಂದಿರುತ್ತಾರೆ. ಸಾರ್ವಜನಿಕರಿಗೆ ಇಲೆಕ್ಟ್ರಿಕ್ ವಾಹನದ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವುದಲ್ಲದೆ ಅಗ್ನಿ ಅವಘಡಗಳಂತಹ ಘಟನೆಗಳು ನಡೆಯಲು ಏನು ಕಾರಣ ಹಾಗೂ ಅಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸುವುದು ಹೇಗೆ ಹಾಗೂ ಇಲೆಕ್ಟ್ರಿಕ್ ವಾಹನಗಳನ್ನು ಬಳಸಿ ಗ್ರಾಹಕರು ಹಣದ ಉಳಿತಾಯ ಮಾಡುವುದರ ಜೊತೆಗೆ ಪರಿಸರವನ್ನು ಹೇಗೆ ರಕ್ಷಿಸಬಹುದು ಎನ್ನುವುದರ ಬಗ್ಗೆಯೂ ಬಹಳ ವಿಸ್ತಾರವಾದ ವಿವರಣೆಯನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕರ್ಣಾಟಕ ಬ್ಯಾಂಕ್ ದಿನಾಂಕ 12.04.2023 ರಂದು ಉಡುಪಿಯಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯಲ್ಲಿ ನಡೆದ 100ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣೇಶ ನಾಯ್ಕ ಅವರಿಗೆ ಸನ್ಮಾನ ಮಾಡಿರುತ್ತಾರೆ.

RELATED ARTICLES  ಪಾದಚಾರಿಗೆ ಲಾರಿ ಡಿಕ್ಕಿ :ಓರ್ವ ಸಾವು

ಶ್ರೀನಿವಾಸ ಇ ವೇಹಿಕಲ್ಸ್‌ ಭಟ್ಕಳ, ಹೊನ್ನಾವರ ಹಾಗೂ ಕುಮಟಾಗಳಲ್ಲಿ ಸುಸಜ್ಜಿತವಾದ ಶೋರೂಮ್ ಗಳನ್ನು ಹೊಂದಿದ್ದು ಸೇಲ್ಸ್, ಸರ್ವಿಸ್, ಸ್ಪೇರ್ ಪಾರ್ಟ್ಸ್ ಹಾಗೂ ಟ್ರೈನಿಂಗ್ ಪಡೆದಿರುವ ಟೆಕ್ನಿಷಿಯನ್ ಗಳನ್ನು ಹೊಂದಿರುತ್ತದೆ. ಪ್ಯೂರ್ ಇವಿ ಕಂಪನಿಯ 2 ಸ್ಕೂಟರ್ ಮಾಡೆಲ್ ಗಳು ಹಾಗೂ ಎರಡು ಬೈಕ್ ಮಾಡೆಲ್ ಗಳು ಶೋರೂಮ್ ನಲ್ಲಿ ಲಭ್ಯವಿರುತ್ತವೆ. ಬೈಕ್ ಮಾಡೆಲ್ ಒಂದು ಚಾರ್ಜಿನಲ್ಲಿ 140 ಕಿಲೋಮೀಟರುಗಳನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಗ್ರಾಹಕರು ಶೋರೂಮ್ ಗಳಿಗೆ ಭೇಟಿ ನೀಡಿ ವಾಹನಗಳ ಬಗೆಗಿನ ಮಾಹಿತಿಯನ್ನು ಪಡೆಯುವುದರ ಜೊತೆಗೆ ವಾಹನದ ಟೆಸ್ಟ್ ರೈಡ್ ಕೂಡ ಮಾಡಬಹುದಾಗಿದೆ.

RELATED ARTICLES  ಅನಂತಮೂರ್ತಿ ಹೆಗಡೆಗೆ ಸಂದ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ಸುವರ್ಣ ಸಾಧಕ ಪ್ರಶಸ್ತಿ