ರಂಗಸಾರಸ್ವತ ಕುಮಟಾ ಉತ್ತರಕನ್ನಡ ಇವರ ನೇತ್ರತ್ವದಲ್ಲಿ ಹೆಸರಾಂತ ನಟ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಭಾಷಾಂತರಿಸಿ, ನಿರ್ದೇಶಿಸಿ ನಟಿಸಿರುವ ಗಾಂಟಿ ಎಂಬ ಕೊಂಕಣಿ ನಾಟಕವನ್ನು ರಂಗಚಿನ್ನಾರಿ ಕಾಸರಗೋಡು ತಂಡದವರು ಕುಮಟಾದ ಗಿಬ್ ಹೈಸ್ಕೂಲ್ ನ ರಾಜೇಂದ್ರ ಪ್ರಸಾದ ಸಭಾಂಗಣದ ಬಳಿಯ ಬಯಲು ರಂಗಸ್ಥಳದಲ್ಲಿ ಪ್ರದರ್ಶಿಸಲಿದ್ದಾರೆ.
ಎಪ್ರಿಲ್ ಹದಿನೈದನೇ ತಾರೀಖಿನ ಶನಿವಾರ ಸಂಜೆ 6 ,30 ಕ್ಕೆಈ ಕಾರ್ಯಕ್ರಮ ಆರಂಭವಾಗಲಿದೆ.
ಈ ನಾಟಕದಲ್ಲಿ ಖ್ಯಾತ ನಟ ಕಾಸರಗೋಡು ಚಿನ್ನಾ ,ಹಿರಿಯನಟ ಮುರಳೀಧರ ಕಾಮತ್ ,ಧಾರಾವಾಹಿ ಹಾಗೂ ಚಲನಚಿತ್ರನಟ ರಂಗ ಕರ್ಮಿ ಶಶಿಭೂಷಣ ಕಿಣಿ ಉಡುಪಿ,ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾಕ್ಟರ್ ಸುಧೀಶ ರಾವ್.ಪ್ರಶಸ್ತಿ ವಿಜೇತ ಕಲಾವಿದೆ ಪುಷ್ಪಲತಾ ಭಟ್, ಚಿತ್ರನಟಿ ಸುಮನಾ ಮಂಗಳೂರು, ಚಿತ್ರನಟಿ ರಂಜಿತಾ ಶೇಟ್ ,ಪ್ರಕಾಶ ನಾಯಕ, ಗಜಾನನ ಶೆಣೈ , ಅಶ್ವಿನ್ ಚೇರ್ಕಲ್ ಮೊದಲಾದ ಅನುಭವಿ ಕಲಾವಿದರ ತಂಡವು ಹೊಂದಿದೆ.
ಈ ನಾಟಕ ತಂಡವು ಈಗಾಗಲೇ ದೇಶದ ಕೆಲವೆಡೆ ಯಶಸ್ವಿ ಪ್ರದರ್ಶನ ನೀಡಿ ಜನಮನ ಗೆದ್ದಿದೆ.
ನಾಟಕದ ಸಂಗೀತವನ್ನು ಹೆಸರಾಂತ ಸಂಗೀತ ನಿರ್ದೇಶಕ ಮುರಳೀಧರ್ ಕಾಮತ್ ರಂಗಸಜ್ಜಿಕೆಯನ್ನು ಸುಹಾಸ್ ರಾವ್ ಮತ್ತು ವೆಂಕಟೇಶ ಶೇಟ್, ಮತ್ತು ವಿಠಲ ನಾಯಕ ಹಾಗೂ ಸುಬ್ರಹ್ಮಣ್ಯ,ಪ್ರಸಾದನ ಪ್ರಕಾಶ್ ಎನ್ ಹಾಗೂ ಬೆಳಕಿನ ವ್ಯವಸ್ಥೆಯನ್ನು ಈಶ್ವರ , ಧ್ವನಿವರ್ಧಕ ಬಾಲು ನಾಯ್ಕ ನಿರ್ವಹಿಸಲಿದ್ದು ಖ್ಯಾತ ಉದ್ಯಮಿ ಡಾ.ಪಿ,ದಯಾನಂದ ಪೈ ಹಾಗೂ ಶ್ರೀಮತಿ ಮೋಹಿನಿ ದಯಾನಂದ ಪೈ ಅವರ ಶುಭಾಶೀರ್ವಾದದೊಂದಿಗೆ ಹಾಗೂ ಕುಮಟಾದ ಕಲಾಪೋಷಕರ ನೆರವಿನಲ್ಲಿ ಉಚಿತವಾಗಿ ಪ್ರದರ್ಶನ ನಡೆಯಲಿದ್ದು.
ರಂಗಸಾರಸ್ವತದ ಮೊಟ್ಟಮೊದಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇದಾಗಿದ್ದು ಕೊಂಕಣಿ ಪರಿಷದ್ ಕುಮಟಾ ಇದರ ಉಪಾಧ್ಯಕ್ಷರಾದ ಶ್ರೀ ಮುರಳೀಧರ ಪ್ರಭು ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಶ್ರೀ ಸುದರ್ಶನ ಹೊನ್ನಾವರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಶ್ರೀ ವಸುದೇವ ಪ್ರಭು ಶ್ರೀ ರಾಮನಾಥ(ಧೀರೂ) ಶಾನಭಾಗ,ಡಾಕ್ಟರ್ ಶಶಾಂಕ ಮಂಕೀಕರ್,ಶ್ರೀ ಜೈವಿಠ್ಠಲ್ ಕುಬಾಲ್ ,ಶ್ರೀ ಪಾಂಡುರಂಗ ವಾಗ್ರೇಕರ್, ಶ್ರೀ ಜಾಕೋಬ್ ಫರ್ನಾಂಡೀಸ್, ಶ್ರೀ ಮಂಜುನಾಥ ಮರಾಠೆ,ಶ್ರೀ ಸುಬ್ರಮಣ್ಯ ಶೇಟ್,ಶ್ರೀ ಅರುಣ ಗುಡಿಗಾರ, ಶ್ರೀ ರವಿ ಗಾವಡಿ, ಶ್ರೀ ರಾಜು ಮಹಾಲೆ, ಶ್ರೀ ಮಂಜುನಾಥ ಚಂದಾವರ್, ಕೇಶವ್ ಅಡ್ಪೇಕರ್, ಶ್ರೀಮತಿ ಶೈಲಾ ಗುನಗಿ ಇವರುಗಳ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು
ರಂಗಸಾರಸ್ವತದ ಆಡಳಿತ ನಿರ್ದೇಶಕ ಕಾಗಾಲ ಚಿದಾನಂದ ಭಂಡಾರಿ ವಿನಂತಿಸಿದ್ದಾರೆ.