ಕುಮಟಾ : ತಾಲೂಕಿನ ಬಾಡ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕೆ. ಪರಮೇಶ್ವರ ರಾವ್ (87) ಬುಧವಾರ ಸಾಯಂಕಾಲ ಕೊನೆಯುಸಿರೆಳೆದರು. ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಾಗಿ ಅನೇಕ ವರ್ಷಗಳ ಕಾಲ ಅತ್ಯುತ್ತಮ ಸೇವೆ ನೀಡಿ, ಅಪಾರ ಶಿಷ್ಯವೃಂದ ಹಾಗೂ ಅಭಿಮಾನಿಗಳನ್ನು ಹೊಂದಿದ್ದ ಇವರು ಕೆ.ಪಿ ರಾವ್ ಮಾಸ್ತರ್ ಎಂದೇ ಪ್ರಸಿದ್ದರಾಗಿದ್ದರು. ಸರಳ ಸಜ್ಜನಿಕೆ ಹಾಗೂ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವ ಮೂಲಕ ಜನರನ್ನು ಗಳಿಸಿದ್ದವರು. ಇವರು ಪತ್ನಿ, ಇಬ್ಬರು ಗಂಡು ಮಕ್ಕಳು( ಖ್ಯಾತ ಧ್ವನಿವರ್ಧಕ ವ್ಯವಸ್ಥೆಯ ನಿನಾದ ರಾಮಣ್ಣ ಸೇರಿ), ಓರ್ವ ಪುತ್ರಿ ಹಾಗೂ ಸಹಸ್ರಾರು ಅಭಿಮಾನಿಗಳನ್ನು ಅಗಲಿದ್ದಾರೆ.

RELATED ARTICLES  ಶಿರಸಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಶಶಿಭೂಷಣ ಹೆಗಡೆಯವರಿಗೆ ಇನ್ನಷ್ಟು ಬಲ.