ಸಾಗರ :ಸಿಡಿದ ಹಿಂದೂ ಸಂಘಟನೆಗಳ ತಣ್ಣಗಾಗಿಸಲು ಹರತಾಳು ಯತ್ನ…! ಎಂಬ ತಲೆಬರಹದ ಅಡಿ ಈ ಹಿಂದೇಯೇ (ಮಾರ್ಚ್ 19) ಸತ್ವಧಾರ ವರದಿ ಮಾಡಿತ್ತು. ಅದರಂತೆಯೇ ಪ್ರಸ್ತುತ ರಾಜಕೀಯದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ.
ಸಾಕಷ್ಟು ಕಾರ್ಯಕರ್ತರ ವಿರೋಧದ ನಡುವೆಯೂ ಸಾಗರದಲ್ಲಿ ಸಾಗರ ಕ್ಷೇತ್ರಕ್ಕೆ ಹಾಲಪ್ಪಗೇ ಟಿಕೆಟ್ ಕೊಡಿಸುವಲ್ಲಿ ಭಾನುಪ್ರಕಾಶ್ ಯಶಸ್ವಿಯಾಗಿದ್ದಾರೆ. ಇನ್ನೂ ಘೋಷಣೆಯಾಗದ ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಮಗ ಹರಿಕೃಷ್ಣಗೆ ಟಿಕೆಟ್ ಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ.
ಸ್ವತಃ ಅರ್.ಎಸ್.ಎಸ್‌ನ(RSS) ಪ್ರಾಂತ ಕಾರ್ಯವಾಹರಾಗಿರುವ ಪಟ್ಟಾಭಿರಾಮ್ ಅವರ ಬೀಗರೂ ಆಗಿರುವ ಭಾನುಪ್ರಕಾಶ್ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸುವ ಉದ್ದೇಶದಿಂದ ಸಾಗರ ಮತ್ತು ಸೊರಬದಲ್ಲಿ ಹಾಲಪ್ಪ ಮತ್ತು ಕಮಾರ್ ಬಂಗಾರಪ್ಪರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವೀಯಾಗಿದ್ದಾರೆ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ.
ಇದರ ನಡುವೆಯೇ ತಮ್ಮ ನಿಕಟವರ್ತಿ ಸಂಘದ ಕಾರ್ಯಕರ್ತರ ಮೂಲಕ ಸಾಗರದಲ್ಲಿ ಅಸಮಾಧಾನ ಶಮನ ಮಾಡುವ ಪ್ರಯತ್ನ ಭಾನುಪ್ರಕಾಶ್ ಮಾಡಿದ್ದಾರೆ. ಇತ್ತೀಚೆಗೆ ಹಾಲಪ್ಪ ಕಡು ವಿರೋಧಿ ನಿಸರಾಣಿ ಶ್ರೀಪಾದ ಹೆಗಡೆ ಮನೆಗೆ ಸಂಧಾನಕ್ಕಾಗಿ ಹೋಗಿದ್ದರು. ಅದರ ನೇತೃತ್ವ ವಹಿಸಿದ್ದೇ ಸಂಘದ ಹಿರಿಯ ಕಾರ್ಯಕರ್ತ ಭಾನುಪ್ರಕಾಶ್ ನಿಕಟವರ್ತಿ ಆ.ಶ್ರೀ ಆನಂದ ಎಂದು ಹೇಳಲಾಗುತ್ತಿದೆ.
ಹೀಗೆ ಹಲವು ಜನ ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಅಸಮಾಧಾನಗೊಂಡಿರುವ ಬಿಜೆಪಿ ಕಾರ್ಯಕರ್ತರನ್ನು ಮನವೊಲಿಸುವ ಪ್ರಯತ್ನ ಭಾನುಪ್ರಕಾಶ್ ಮಾಡುತ್ತಿದ್ದಾರೆ. ಅವರ ಯೋಜನೆಯಂತೆಯೇ ಶಿವಮೊಗ್ಗ ಕ್ಷೇತ್ರದಲ್ಲಿ ಮಗ ಹರಿಕೃಷ್ಣಗೆ ಬಿಜೆಪಿ ಟಿಕೆಟ್ ಸಿಗಬಹುದೇ ಕಾದು ನೋಡಬೇಕಿದೆ.