ಅಂಕೋಲಾ : ತಾಲೂಕಿನ ಭಾವಿಕೇರಿಯಲ್ಲಿ ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಬಡಿದು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಶೋಭಾ ಗೋಪಾಲ ನಾಯಕ ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.

ಈಕೆ ತನ್ನ ಮನೆ ಮುಂದಿನ ಡಾಂಬರು ರಸ್ತೆ ಪಕ್ಕದ ಕಚ್ಚಾ ಮಣ್ಣಿನ ರಸ್ತೆಯಲ್ಲಿ ತನ್ನ ಗಂಡ ವೈಭವ ನಾಯಕನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈಕೆ ಸುಮಾರು 3-4 ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.

RELATED ARTICLES  ಎ.ಟಿ.ಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಜನರಿಗೆ ಮೋಸ‌ ಮಾಡುತ್ತಿದ್ದ ಖತರ್ನಾಕ್ ಆಸಾಮಿ ಪೊಲೀಸ್ ಬಲೆಗೆ

ಜವರಾಯನಂತೆ ಬಂದ ರಿಕ್ಷಾ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷದಿಂದ ತನ್ನ ವಾಹನವನ್ನು ಚಲಾಯಿಸಿ, ಮಹಿಳೆಗೆ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ, ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾರವಾರ ಹಾಗೂ ತೋಕೂರು ನಡುವೆ ಸಂಚರಿಸುವ ರೈಲ್ವೆ ಸಮಯದಲ್ಲಿ ಬದಲಾವಣೆ.

ಅಪಘಾತದ ರಭಸಕ್ಕೆ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ಚಾಲಕ ಗರ್ಭಿಣಿ ಮಹಿಳೆಗೆ ಅಪಘಾತಪಡಿಸಿ ತಾನು ಚಲಾಯಿಸುತ್ತಿದ್ದ ರಿಕ್ಷಾ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.