ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಅಭ್ಯರ್ಥಿಯಾಗಿರುವ ದಿನಕರ ಕೆ. ಶೆಟ್ಟಿಯವರು ಇಂದು ಶ್ರೀ ರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯಾಶೀರ್ವಾದ ಪಡೆದರು. ಶ್ರೀಗಳನ್ನು ಭೇಟಿಮಾಡಿದ ದಿನಕರ ಶೆಟ್ಟಿ ಫಲ ಸಮರ್ಪಣೆ ಗೈದು ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭವಾಗಿದ್ದು, ಯಶಸ್ಸು ಸಿಗುವಂತೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಎಮ್. ಜಿ. ಭಟ್, ಗಜಾನನ ಪೈ, ವಿನಾಯಕ ಭಟ್, ಆನಂದು ಕವರಿ, ವಿಷ್ಣು ಗೌಡ, ಅಮರನಾಥ ಭಟ್ ಜೊತೆಗಿದ್ದರು.

RELATED ARTICLES  ಲಾರಿ ಹಾಗೂ ಕಾರಿನ ನಡುವೆ ಅಪಘಾತ