ಅಂಕೋಲಾ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಅಂಕೋಲಾ ತಾಲೂಕು ಘಟಕದ ನೂನತ ಕಾರ್ಯಕಾರಿ ಸಮಿತಿ ಕಾರ್ಯಚಟುವಟಿಕೆಯ ಉದ್ಘಾಟನಾ ಕಾರ್ಯಕ್ರಮ ಏ.೧೬ ರಂದು ಮಧ್ಯಾಹ್ನ ೩ ಗಮಟೆಗೆ ಪಟ್ಟಣದ ಕೆ.ಎಲ್.ಇ. ಕಾಲೇಜಿನ ಸಭಾಭವನದಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಡಿ.ನಾಯ್ಕ ಹನೆಹಳ್ಳಿ ಅವರು ಹಣತೆ ಬೆಳಗಿ ಉದ್ಘಾಟಿಸಲಿದ್ದಾರೆ.


ಮುಖ್ಯ ಅತಿಥಿಯಾಗಿ ಅಂಕೋಲಾ ಜಿ.ಸಿ. ಕಾಲೇಜಿನ ಪ್ರಾಚಾರ್ಯ ಡಾ. ಸಿದ್ದಲಿಂಗಸ್ವಾಮಿ ವಸ್ತçದ, ಕೆ.ಎಲ್.ಇ. ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಅರ್ಚನಾ ನಾಯ್ಕ ಪಾಲ್ಗೊಳ್ಳಲಿದ್ದಾರೆ.

RELATED ARTICLES  ಉತ್ತರ‌ಕನ್ನಡದಲ್ಲಿ ಕೊರೋನಾ ಆರ್ಭಟ : ಎಲ್ಲೆಲ್ಲಿ ಹೇಗಿದೆ ಗೊತ್ತಾ ಸೋಂಕು.


ಹಣತೆ ಜಿಲ್ಲಾ ಪ್ರಧಾನ ಸಂಚಾಲಕ ಎನ್.ಜಯಚಂದ್ರನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಪ್ರಕಾಶ ನಾಯಕ ಬೆಳಸೆ, ದಾಮೋದರ ನಾಯ್ಕ ಹಣತೆ ಕಾರವಾರ ಘಟಕದ ಅಧ್ಯಕ್ಷ ನಾಗರಾಜ ಹರಪನಳ್ಳಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ ಜಾಂಬ್ಲೇಕರ್ ಅವರು ಗೌರವ ಉಪಸ್ಥಿತರಿರಲಿದ್ದಾರೆ ಎಂದು ಹಣತೆ ತಾಲೂಕು ಘಟಕದ ಅಧ್ಯಕ್ಷ ಅಕ್ಷಯ ಶ್ರೀಪಾದ ನಾಯ್ಕ ಬೊಬ್ರುವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣತೆ ಅಂಕೋಲಾ ಘಟಕ: ಹಣತೆ ಅಂಕೋಲಾ ಘಟಕದ ನೂತನ ಕಾರ್ಯಕಾರಿ ಸಮಿತಿಯನ್ನು ಜಿಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ರಚಿಸಲಾಗಿದ್ದು, ಅಧ್ಯಕ್ಷರಾಗಿ ಅಕ್ಷಯ ಶ್ರೀಪಾದ ನಾಯ್ಕ ಬೊಬ್ರುವಾಡ, ಉಪಾಧ್ಯಕ್ಷರಾಗಿ ಅನಂತ ಆರ್. ಕಟ್ಟಿಮನಿ, ಗೌರವ ಕಾರ್ಯದರ್ಶಿಗಳಾಗಿ ಮಾರುತಿ ಹರಿಕಂತ್ರ, ನಿಶಾಚಿತ ಎಂ. ಆಗೇರ, ಗೌರವ ಕೋಶಾಧ್ಯಕ್ಷರಾಗಿ ನಾಗರಾಜ ಜಾಂಬ್ಳೇಕರ್ ಅವರು ಆಯ್ಕೆ ಆಗಿ ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಘ್ನೇಶ್ ಎಸ್. ನಾಯ್ಕ, ನಿಲೇಶ ಡಿ. ನಾಯ್ಕ, ಅಕ್ಷಯ ಹಿಲೂರು, ದೀಪಾ ಜೆ. ನಾಯ್ಕ, ಅಮಿತ್ ಜೆ. ಗೌಡ, ಶೀತಲ ಪಿ. ಆಗೇರ, ಅಭಷೇಕ ಆರ್. ನಾಯ್ಕ ನೇಮಕಗೊಂಡಿದ್ದಾರೆ ಎಂದು ಹಣತೆ ತಾಲೂಕಾಧ್ಯಕ್ಷ ಅಕ್ಷಯ ಶ್ರೀಪಾದ ನಾಯ್ಕ ಬೊಬ್ರುವಾಡ ತಿಳಿಸಿದ್ದಾರೆ.

RELATED ARTICLES  ಯಶಸ್ವಿಯಾಗಿ ಸಂಘಟಿತವಾದ ರವಿರಾಜ ಟ್ರೋಫಿ: ಸಂಘಟಕರಿಗೆ ಅಭಿನಂದನೆ