ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ನಿವೇದಿತಾ ಆಳ್ವಾ ಅವರನ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಕಾರ್ತಕರ್ತರಲ್ಲಿ ಅಸಮಧಾನ ಸ್ಪೋಟಗೊಂಡಿದ್ದು ಮಾಜಿ ಶಾಸಕಿ ಶಾರದಾ ಶೆಟ್ಟಿಯವರ ಮನೆಯಲ್ಲಿ ಪಕ್ಷದ ಹಲವು ವಿಭಾಗದ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಸಭೆ ಸೇರಿ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಅನ್ಯಾಯವಾಗಿದ್ದು ,ಅವರು ಪಕ್ಷೇತರ ನಿಲ್ಲಲೇ ಬೇಕೆಂದು ಪಟ್ಟು ಹಿಡಿದರು.

ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ಅತ್ಯಂತ ಭಾವುಕರಾಗಿ ಮಾತನಾಡಿ ದಿವಂಗತ ಮೋಹನ ಶೆಟ್ಟಿಯವರು ಕಾಂಗ್ರೆಸ್ ಪಕ್ಷವನ್ನ ಅತ್ಯಂತ ಕಷ್ಟಪಟ್ಟು ಕಟ್ಟಿಬೆಳೆಸಿ ಶಾಸಕನಾಗಿ ಕ್ಷೇತ್ರದ ಜನತೆಯ ಅಪಾರ ಪ್ರೀತಿ ವಿಶ್ವಾಸವನ್ನ ಗಳಿಸಿದ್ದರು ಅವರ ನಿಧನದ ನಂತರ ಅವರ ಅಭಿವೃದ್ದಿ ಕನಸುಗಳನ್ನ ಸಾಕಾರ ಗೊಳಿಸಲು ನಾ ಅವರ ಅಭಿಮಾನಿಗಳ ನಿರ್ಣಯದಂತೆ ಶಾಸಕಿಯಾಗಿ ಆಯ್ಕೆ ಆದೆ ಸಾವಿರಾರು ಕೋಟಿ ಅನುಧಾನಗಳನ್ನ ತಂದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ ಆದರೆ ಅನಿವಾರ್ಯವಾಗಿ ಪರೇಶ ಮೇಸ್ತಾ ಸಾವಿನ ಪ್ರಕರಣದಿಂದ ಬಿ.ಜೆ.ಪಿ ಷಡ್ಯಂತ್ರಕ್ಕೆ ಭಲಿಯಾಗಿ ಸೋಲು ಅನುಭವಿಸಬೇಕಾಯಿತು ಆದರೂ ದೃತಿಗೆಡದೆ ಕಳೆದ ಐದು ವರ್ಷ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೇಳಿದ್ದೆ ಪಕ್ಷದ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶುವಕುಮಾರ ಅವರು ಟಿಕೆಟ್ ನೀಡುವ ಭರವಸೆ ನೀಡಿದ್ದರೂ ಕೊನೆಯ ಕ್ಷಣದಲ್ಲಿ ಈ ತಾಲೂಕಿನಲ್ಲಿ ಗುರುತಿನ ಚೀಟಿಯನ್ನೂ ಹೊಂದಿರದ ಕ್ಷೇತ್ರದ ಪರಿಚಯವೇ ಇರದ ನಿವೇದಿತಾ ಆಳ್ವಾ ಅವರಿಗೆ ಟಿಕೆಟ್ ನೀಡಿ ನನಗೆ ಅನ್ಯಾಯ ಮಾಡಿದ್ದಾರೆ, ಇದರಿಂದ ನಮ್ಮನ್ನೇ ಅವಲಂಭಿಸಿರುವ ಪಕ್ಷದ ಕಾರ್ಯಕರ್ತರು ನಮ್ಮ ಉಳಿವಿನ ಸಲುವಾಗಿ ಪಕ್ಷೇತರರಾಗಿ ನಿಲ್ಲ ಬೇಕೆಂದು ಹಠ ಹಿಡಿದಿರುವುದರಿಂದ ಪಕ್ಷೇತರವಾಗಿ ಸ್ಪರ್ಧಿಸಲು ನಿಶ್ಚಯಿಸಿದ್ದೇನೆ ಒಂದೆರಡು ದಿನದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.

RELATED ARTICLES  ಹಾಲು ತುಂಬಿ ಸಾಗುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿ

ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್‌.ನಾಯ್ಕ ಮಾತನಾಡಿ ನಿನ್ನೆಯ ದಿನ ಪಕ್ಷ ನಿವೇದಿತಾ ಆಳ್ವಾ ಅವರಿಗೆ ಮುಂಬರುವ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅವಕಾಶ ನೀಡಿದ್ದು ಕುಮಟಾ ತಾಲೂಕಿನಾಧ್ಯಂತ ಪಕ್ಷದ ನಿರ್ಣಯದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ, ಪಕ್ಷವನ್ನ ಕಟ್ಟಿ ಬೆಳೆಸಿ ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ನಿರಂತರ ಭಾಗಿಯಾಗಿರುವ ಮಾಜಿ ಶಾಸಕಿ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಅನ್ಯಾಯವಾಗಿ ಟಿಕೆಟ್ ವಂಚಿಸಲಾಗಿದ್ದು ಪಕ್ಷದ ಕಾರ್ಯಕರ್ತರ ಆಶಯದಂತೆ ನಾನು ರಾಜಿನಾಮೆ ಸಲ್ಲಿಸಿದ್ದೇನೆ ಅಲ್ಲದೆ ಪಕ್ಷದ ಹಲವು ಪ್ರಮುಖ ಪದಾದಿಕಾರಿಗಳು ಈ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ ಎಂದರು.

RELATED ARTICLES  ಕುಮಟಾ ಉತ್ಸವ : ನಗೆಗಡಲಲ್ಲಿ ತೇಲಿದ ನೆನಪಿನೊಂದಿಗೆ ಇಂದು ನಡೆಯಲಿದೆ ಅತ್ಯುತ್ತಮ ಕಾರ್ಯಕ್ರಮ.

ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದವರಿಗೆ ಬೆಲೆ ಇಲ್ಲದಂತಾಗಿದೆ ಎಂದು ಕಾರ್ಯಕರ್ತರು ಪಕ್ಷದ ವಿರುದ್ಧವಾಗಿ ಮಾತನಾಡಿದರು. ಕಾಂಗ್ರೆಸ್ ಸೇವಾದಳ ತಾಲೂಕಾಧ್ಯಕ್ಷ ನಿತ್ಯಾನಂದ ನಾಯ್ಕ, ಬ್ರಿಗೇಡ್ ಸೇವಾದಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಕ್ಷಯ ನಾಯ್ಕ, ಕಾರ್ಮಿಕ ವಿಭಾಗದ ಮನೋಜ ನಾಯ್ಕ ತೊರ್ಕೆ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾಯ್ಕ ಬರ್ಗಿ, ತಾಲೂಕಾಧ್ಯಕ್ಷ ವಿಜಯ ವೆರ್ಣೇಕರ, ಪ್ರಚಾರ ಸಮಿತಿ ಸಂಚಾಲಕಿ ತಾರಾ ಗೌಡ, ಮಹಿಳಾ ತಾಲೂಕಾಧ್ಯಕ್ಷ ಸುರೇಖಾ ವಾರೇಕರ, ಹಿಂದುಳಿದ ವರ್ಗಗಳ ವಿಭಾಗದ ತಾಲೂಕಾಧ್ಯಕ್ಷ ಹನುಮಂತ ಪಟಗಾರ ಸೇರಿದಂತೆ ೨೨ ಘಟಕಾಧ್ಯಕ್ಷರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು.