ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ, ಶಾಸಕ ದಿನಕರ ಶೆಟ್ಟಿಯವರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ತನ್ನಿಮಿತ್ತ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯದಲ್ಲಿ ಇಂದು ಮಂತ್ರಘೋಷಗಳ ಸಮೇತ ಗಣಹೋಮ ಹಾಗೂ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

ಭಾರತೀಯ ಜನತಾ ಪಾರ್ಟಿ ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಹಾಗೂ ಅವರ ಧರ್ಮಪತ್ನಿ ಪೂಜಾಕೈಂಕರ್ಯ ನೆರವೇರಿಸಿದರು. ಅಭ್ಯರ್ಥಿ ದಿನಕರ ಶೆಟ್ಟಿಯವರು ವೈದಿಕರಿಂದ ಫಲಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು.

RELATED ARTICLES  ಹೈಸ್ಕೂಲ್ ವಿದ್ಯಾರ್ಥಿ ನಾಪತ್ತೆ: ಅಪಹರಣ ಶಂಕೆ ?

ವಿಭಾಗದ ಸಹಪ್ರಭಾರಿ ಎನ್. ಎಸ್. ಹೆಗಡೆ, ಜಿಲ್ಲಾ ಸಹಪ್ರಭಾರಿ ಪ್ರಸನ್ನ ಕೆರೆಕೈ, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹಸಂಚಾಲಕ ಹಾಗೂ ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಉಷಾ ಹೆಗಡೆ ಹಾಗೂ ಗುರುಪ್ರಸಾದ್ ಹೆಗಡೆ, ಮಂಡಲದ ಪ್ರಧಾನಕಾರ್ಯದರ್ಶಿಗಳಾದ ವಿನಾಯಕ ನಾಯ್ಕ್ ಹಾಗೂ ಜಿ. ಐ. ಹೆಗಡೆ, ಪಕ್ಷದ ಜಿಲ್ಲಾ ಹಾಗೂ ಮಂಡಲದ ಪ್ರಮುಖರು, ವಿವಿಧ ಸ್ಥರಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES  ಇಂದಿನ(ದಿ-29/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.