ಕುಮಟಾ : ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ರಂಗ ಸಾರಸ್ವತ ,ಸಾಹಿತ್ಯಕ ಸಾಂಸ್ಕೃತಿಕ ಸಂಟನೆಯ ನೇತ್ರತ್ವದ ಮೊದಲ ಕಾರ್ಯಕ್ರಮವಾಗಿ ರಂಗಕರ್ಮಿ, ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಭಾಷಾಂತರಿಸಿ ನಿರ್ದೇಶನಮಾಡಿ ನಟಿಸಿರುವ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಕೊಂಕಣಿ ನಾಟಕವಾದ ‘ಗಾಂಟಿ’ ಇದರ ಪ್ರದರ್ಶನವು ಶನಿವಾರ ರಾತ್ರಿ ಗಿಬ್ ಹೈಸ್ಕೂಲ್ ಕುಮಟಾದ ಬಯಲು ರಂಗಮಂದಿರದಲ್ಲಿ ಅದ್ಧೂರಿಯಾಗಿ ನೆರವೇರಿತು.

ಆರಂಭದಲ್ಲಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಂಕಣ ಎಜ್ಯುಕೇಶನ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಕೊಂಕಣಿ ಪರಿಷತ್ತಿನ ಉಪಾಧ್ಯಕ್ಷ ಮುರಳಿಧರ ಪ್ರಭು ಅವರು ಮಾತನಾಡಿ. ಮಾತೃಭಾಷೆಯನ್ನು ಉಳಿಸಿ ಬೆಳಸಬೇಕಾದದ್ದು ಎಲ್ಲರ ಆದ್ಯ ಕರ್ತವ್ಯ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾಷಾ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು. ಕಾಸರಗೋಡು ಚಿನ್ನಾ ನಿಜಕ್ಕೂ ಕುಮಟಾಕೆ ಹತ್ತಿರವಾಗಿ ಅನೇಕ ಇಂಥ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅವರು ಇಲ್ಲಿಯೇ ನೆಲೆಸಿ ಕುಮಟಾದ ಚಿನ್ನವಾಗಬೇಕು ಎಂದರು.
ರಂಗಸಾರಸ್ವದ ಈ ವಿನೂತನ ಪ್ರಯೋಗಕ್ಕೆ ನಿಜವಾಗಿ ಹೆಮ್ಮೆ ಎನಿಸಿದೆ. ಕೊಂಕಣಿ ಭಾಷಿಕ ವಿವಿಧ ಸಮುದಾಯದ ಯುವ ಪ್ರಮುಖರು ವೇದಿಕೆಯನ್ನು ಹಂಚಿಕೊಂಡಿರುವುದು ಸಂತೋಷವನ್ನುಂಟು ಮಾಡಿದೆ ಹೊಸಾಡ ಬಾಬುಟಿ ನಾಯಕರ ನಾಟಕ ನೋಡಲು ಈ ಹಿಂದೆ ಬಹಳಷ್ಟು ಮಂದಿ ಸೇರುತ್ತಿದ್ದರು.
ಇಂದು ಅಂತಹುದೇ ವಾತವರಣ ಕಂಡುಬರುತ್ತಿದೆ. ರಂಗಸಾರಸ್ವತದ ಕಾಗಾಲ ಚಿದಾನಂದ ಭಂಡಾರಿ ಹಾಗೂ ಅವರ ಬಳಗ ಕೇವಲ ದೂರವಾಣಿಯ ಮೂಲಕ ಪ್ರಯತ್ನಿಸಿ ಇಷ್ಟೊಂದು ಸಂಖ್ಯೆಯಲ್ಲಿ ಜನಸೇರಿಸಿದ್ದಾರೆ ನಿಜಕ್ಕೂ ಇದು ಮೆಚ್ಚುವಂತಹದ್ದು ಎಂದರು.

RELATED ARTICLES  ದೇಶದ ಐಕ್ಯತೆಗಾಗಿ ಪ್ರಾಣಾರ್ಪಣೆ ಮಾಡಿದ ದಿಟ್ಟ ಮಹಿಳೆ ಇಂದಿರಾಗಾಂಧಿ - ಜಗದೀಪ ತೆಂಗೇರಿ

ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಸರಗೋಡು ಚಿನ್ನಾ ಅವರು ನನಗೆ ಕುಮಟಾದ ಮೇಲೆ ಅಪಾರ ಪ್ರೀತಿ ವಿಶ್ವಾಸ ಇದೆ ಇದೊಂದು ಕೊಂಕಣಿಯ ಸಾಂಸ್ಕೃತಿಕ ಕೇಂದ್ರ ಆಗಬೇಕಿದೆ ತಾನು ಕೊಂಕಣಿ ಅಕಾಡೆಮಿ ಅಧ್ಯಕ್ಷ ಇದ್ದ ವೇಳೆ ಮಣಿಪಾಲದಲ್ಲಿ ಕೊಂಕಣಿ ಭಾಷೆಯ ಅನೇಕ ವಿವಿಧ ಸಮುದಾಯದವರನ್ನು ಒಂದೇ ವೇದಿಕೆಗೆ ಕರೆತಂದಿದ್ದೆ ಇಂದು ಅಂತಹುದೇ ಕಿರು ಪ್ರಯತ್ನ ಸಾಗಿದೆ. ರಂಗಸಾರಸ್ವತ ಸದುದ್ದೇಶದ ಸಂಘಟನೆ ಆಗಿದ್ದು ಭಾಷೆ ಹಾಗೂ ಸಾಹಿತ್ಯದ ಸೇವೆ ಮಾಡಲಿದೆ. ಈ ಪ್ರಯತ್ನಕ್ಕೆ ಸರ್ವರ ಸಹಕಾರ ಅಗತ್ಯ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಡಾಕ್ಟರ್ ಶಶಾಂಕ ಮಂಕೀಕರ್ ಅವರು ರಂಗ ಸಾರಸ್ವತ ನಿಜವಾದ ಅರ್ಥದಲ್ಲಿ ಸರಸ್ವತಿಯ ಉಪಾಸನೆ ಮಾಡುತ್ತಲಿದೆ. ಈ ಸಂಘಟನೆಯ ಬಲವಾಗಿ ಬೆಳೆದು ಒಂದು ಬೃಹತ್ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

RELATED ARTICLES  ಉದಯ "DEEPAVALI DELIGHTS" ಲಕ್ಕಿ ಡಿಪ್ ವಿಜೇತರ ವಿವರ ಇಲ್ಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಡಬ್ಲುಡಿ ಯ ನಿವೃತ್ತ ಅಭಿಯಂತರ ಸುದರ್ಶನ ಹೊನ್ನಾವರ ವಹಿಸಿದ್ದರು. ವೇದಿಕೆಯಲ್ಲಿ ಕೇಶವ ಅಡ್ಪೇಕರ್,ಪಾಂಡುರಂಗ ಶೇಟ್ ,ಜೊಸೆಫ ನರೂನಾ,ಅರುಣ ಶೇಟ್, ಮಂಜುನಾಥ ಟಿ ಮರಾಠಿ, ರವಿ ಗಾವಡಿ, ಸುಬ್ರಮಣ್ಯ ಶೈಲಾ ಗುನಗಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಪ್ರಶಾಂತ ಗಾವಡಿ ಪ್ರಾರ್ಥಿಸಿದರು. ರಂಗಸಾರಸ್ವತದ ಆಡಳಿತ ನಿರ್ದೇಶಕ ಕಾಗಾಲ ಚಿದಾನಂದ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅರುಣ ಮಣಕೀಕರ್ ವಂದಿಸಿದರು. ಡಾಕ್ಟರ ಪಿ ದಯಾನಂದ ಪೈ ಮತ್ತು ಶ್ರೀಮತಿ ಮೋಹಿನಿ ದಯಾನಂದ ಪೈ ಅವರ ಶುಭಾಶೀರ್ವಾದದೊಂದಿಗೆ ಪ್ರದರ್ಶನ ಗೊಂಡ ‘ಗಾಂಟಿ’ ನಾಟಕ ಎಲ್ಲರ ಮೆಚ್ಚುಗೆ ಗಳಿಸಿತು.