ಹೊನ್ನಾವರ : ಕ್ಷೇತ್ರದ ಒಳಗಿನವನು, ಹೊರಗಿನವನು ಎನ್ನುವ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೇ, ಕಾಂಗ್ರ‍್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಜನತೆಗೆ ಮನವರಿಕೆ ಮಾಡಿಕೊಡುವಂತೆ ಹೊನ್ನಾವರ-ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿವೇದಿತ್ ಆಳ್ವಾರವರು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶೀಸಿ ಮಾತನಾಡುತ್ತಿದ್ದರು. ಕುಮಟಾ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನನ್ನ ಮೂಲ ಗುರಿ. ನನ್ನ ಕುಟುಂಬ ಕಾಂಗ್ರೆಸ್ ಪಕ್ಷ ಮತ್ತು ಜನರ ಸೇವೆಗೆ ಕಂಕಣ ಬದ್ಧರಾಗಿದ್ದು, ನನ್ನ ಅಜ್ಜ ಜೋಕಿಂ ಆಳ್ವಾ ಮೂರು ಬಾರಿ ಜಿಲ್ಲೆಯನ್ನು ಪ್ರತಿನಿದಿಸಿದ್ದರು. ನನ್ನ ತಾಯಿ ಶ್ರೀಮತಿ ಮಾರ್ಗರೇಟ್ ಆಳ್ವಾ ಸಂಸದೆಯಾಗಿ ಕೆನರಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದು ಕ್ಷೇತ್ರದ ಜನ ಇಂದಿಗೂ ಮರೆತಿಲ್ಲಾ ಎಂದರು.

RELATED ARTICLES  ಯಲ್ಲಾಪುರದ ರಂಗ ಸಹ್ಯಾದ್ರಿ ಇವರ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ 'ಕಲಾಹಬ್ಬ 2018'

ನನ್ನ ಪೂರ್ವಜರ ನೆರಳಿನಲ್ಲಿಯೇ ನಾನು ಕೂಡಾ ಕಳೆದ ಹದಿನೆಂಟು ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜ್ಯ ಯುವ ಕಾಂಗ್ರೆಸ್ ಮತ್ತು ಕೆ.ಪಿ.ಸಿ.ಸಿ. ಪದಾಧಿಕಾರಿಯಾಗಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಜಿಲ್ಲೆಯಲ್ಲಿ ಅನೇಕ ತೂಗು ಸೇತುವೆಗಳನ್ನು ನಿರ್ಮಿಸಿ, ಕರ್ಕಿ ಮತ್ತು ಹಳದೀಪುರ ಭಾಗಗಳಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಿರುವುದು ಇಂದಿಗೂ ಜನ ನೆನಪಿಸುತ್ತಿದ್ದಾರೆ ಎಂದರು. ಕುಮಟಾ ಕ್ಷೇತ್ರದ ಹೊರಗಿನವನು ಎನ್ನುವುದು ವಿರೋಧ ಪಕ್ಷಗಳ ಕುಹಕದ ಮಾತಾಗಿದ್ದು, ವಿರೋಧಿಗಳಿಗೆ ತಕ್ಕ ಉತ್ತರ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

RELATED ARTICLES  ಗೊತ್ತಿದ್ದೂ ಗೊತ್ತಿಲ್ಲದಂತಿರುವ ವಿದ್ಯುತ್ ಇಲಾಖೆ ಭಾರೀ ಅಪಾಯದ ಸೂಚನೆ ಕೊಡುತ್ತಿರುವ ಮರ