ಹೊನ್ನಾವರ : ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಿವೇದಿತಾ ಆಳ್ವಾ ಇಂದು ಹೊನ್ನಾವರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸುವ ವೇಳೆ, ಮೂಲ ಕಾಂಗ್ರೆಸ್ ನಾಯಕರನ್ನ ಕಡೆಗಣಿಸಿ ಹೊಸಬರಿಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡ ಕಾಂಗ್ರೆಸ್ ಮೂಲ ಕಾರ್ಯಕರ್ತರು ಹೊನ್ನಾವರದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಗೇರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ನಿವೇದಿತಾ ಆಳ್ವಾ ವಿರುದ್ಧ ಕಿಡಿಕಾರಿರುವ ಘಟನೆ ನಡೆದಿದೆಯೆಂಬುದಾಗಿ ವರದಿಯಾಗಿದೆ.

RELATED ARTICLES  ಚಿತ್ರಿಗಿ: ಹಬ್ಬದ ಖಾದ್ಯ ಸವಿದ ಸಂಭ್ರಮ: ನೈರ್ಮಲ್ಯ ಪಾಠ ಕಲಿಸಿದ ಮಕ್ಕಳ ಸಂತೆ

ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಕಾಂಗ್ರೆಸ್ ನಲ್ಲಿ ಮತ್ತಷ್ಟು ಅಸಮಧಾನ ಸ್ಫೋಟ ಗೊಂಡಿದೆ. ನಮ್ಮ ಕಾಂಗ್ರೆಸ್ ಸಂಘಟೆಗಾಗಿ ಶಾರದಾ ಶೆಟ್ಟಿ ಸೇರಿದಂತೆ ಅನೇಕರು ಕೆಲಸ ಮಾಡಿದ್ದಾರೆ. ಕ್ಷೇತ್ರದವರು ಅಲ್ಲದೆ ಇರುವವರಿಗೆ ಪಕ್ಷ ಮಣೆಹಾಕಿದೆ ಇದಕ್ಕೆ ನಮ್ಮ ಬೆಂಬಲಬಿಲ್ಲ, ಹೈಕಮಾಂಡ ಬಂದು ಅವರನ್ನ ಗೆಲ್ಲಿಸಿಕೊಂಡು ಹೋಗಲಿ ಎಂದಿರುವ ಮೂಲ ಕಾಂಗ್ರೆಸ್ ಕಾರ್ಯಕರ್ತರು ಬ್ಲಾಕ್ ಕಾಂಗ್ರೆಸ್ ಪ್ರಮುಖರ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

RELATED ARTICLES  ಕೇರಳದಲ್ಲಿ ನಡೆದ ಅಕಾಡೆಮಿ ಕಾರ್ಯಾಗಾರದಲ್ಲಿ ಉಮೇಶ ಮುಂಡಳ್ಳಿ ಭಾವಗೀತೆ ಲೋಕಾರ್ಪಣೆ