ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಬೆಂಬಲಿಗರೊಂದಿಗೆ ಬಂದು ಕುಮಟಾದ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿಯವರು ಕುಮಟಾಕ್ಕೆ ಬಂದು ಬಿ-ಫಾರಂ ನೀಡಿದ್ದಾರೆ. ಆ ದಿನವೇ ಅಧಿಕೃತವಾಗಿ ನಾನು ನಾಮಪತ್ರ ಸಲ್ಲಿಸಿದ್ದು, ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತಿದೇನೆ. ಕಳೆದ 15-20 ವರ್ಷಗಳಿಂದ ನಾನು ಕ್ಷೇತ್ರದಲ್ಲಿ ನಡೆಸಿದ ಹೋರಾಟ ಹಾಗೂ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀರಕ್ಷೆಯಾಗಿದೆ. ಎಲ್ಲರೂ ನನ್ನನ್ನು ಮನೆ ಮಗನಂತೆ ಕಾಣುತ್ತಿದ್ದಾರೆ ಹೀಗಾಗಿ ಈ ಚುನಾವಣೆಯಲ್ಲಿ ನನಗೆ ಜಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

RELATED ARTICLES  ಸ್ವತಃ ಡ್ರೋನ್ ಹಾರಿಸುವ ಮೂಲಕ ನಿಯಮ ಪಾಲನೆ ಬಗ್ಗೆ ತಿಳಿದ ಡಿ.ವೈ.ಎಸ್.ಪಿ

ಈ ಕ್ಷೇತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಅದೆಷ್ಟೋ ಹೋರಾಟ ನಡೆಸಿದ್ದೇನೆ. ಸತ್ಯ ಧರ್ಮ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ. ಈ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿ ಕುಂಠಿತವಾಗಿದೆ. ಎರಡು ನದಿಗಳಿದ್ದರೂ ರೈತರಿಗೆ ಯಾವುದೇ ಉಪಯುಕ್ತ ಯೋಜನೆಗಳು ಇಲ್ಲ. ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಸೂಕ್ತ ಕೆಲಸವಾಗಿಲ್ಲ. ಮೀನುಗಾರರಿಗೆ ವ್ಯವಸ್ಥೆ ಇಲ್ಲ. ಕೂಲಿಕಾರ್ಮಿಕರಿಗೂ ಅನ್ಯಾಯ ಮಾಡುವ ಶಾಸಕರನ್ನು ನಾನು ನೋಡಿದ್ದೇನೆ. ಈಗಿರುವ ಶಾಸಕರಾದ ದುರಾಡಳಿತ ಹೆಚ್ಚಾಗಿದೆ ಎನ್ನುವುದು ಜನರಿಗೆ ತಿಳಿದಿದೆ. ಒಂದು ಕಡೆ ಅನ್ಯಾಯ, ಒಂದು ಕಡೆ ಭ್ರಷ್ಟಾಚಾರ, ಎಲ್ಲ ದೃಷ್ಟಿಕೋನದಿಂದ ಸರಿಪಡಿಸಲು ಜನರು ಸಜ್ಜಾಗಿದ್ದು ಮನೆ ಮಗನಾಗಿ ಜನರು ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

RELATED ARTICLES  ಭಟ್ಕಳ : ಡಿ 11ಕ್ಕೆ ಶ್ರೀ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ

ನನ್ನ ಹೋರಾಟದ ಬಲ ಹಾಗೂ ಕುಮಾರಸ್ವಾಮಿ ದೇವೇಗೌಡರು ಮಾಡಿರುವ ಸೇವೆಯಿಂದ ಜನರು ನನ್ನನ್ನು ಹರಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಪತ್ನಿ ವೀಣಾ ಸೂರಜ್ ನಾಯ್ಕ ಸೋನಿ, ಕಾರವಾರ ಕ್ಷೇತ್ರದ ಅಭ್ಯರ್ಥಿ ಚೈತ್ರಾ ಕೊಠಾರಕರ್, ಜಿಲ್ಲಾ ಅಧ್ಯಕ್ಷರಾದ ಗಣಪಯ್ಯ ಗೌಡ, ತಾಲೂಕಾ ಅಧ್ಯಕ್ಷರಾದ ಸಿ.ಜಿ ಹೆಗಡೆ, ಟಿ.ಟಿ ನಾಯ್ಕ ಇನ್ನಿತರರು ಇದ್ದರು.