ಕುಮಟಾ : ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಆಳ್ವಾಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಂಡಾಯದ ಬಾವುಟ ಹಾರಿಸಿ ಹೊರಬಂದಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ನನಗೆ ಟಿಕೇಟ್ ನೀಡದೇ ನಿವೇದಿತ ಆಳ್ವಾ ಅವರಿಗೆ ನೀಡಿರುವುದರಿಂದ ಪಕ್ಷದ ಮೇಲಿನ ವಿಶ್ವಾಸ ಕಳೆದು ಹೋಗಿದೆ. ಇದರಿಂದ ಬೇಸರಗೊಂಡಿದರುವ ಕಾರ್ಯಕರ್ತರು ಮತ್ತು ದಿ.ಮೋಹನ ಶೆಟ್ಟಿ ಅಭಿಮಾನಿಗಳ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನ ಕೈಗೊಂಡಿದ್ದೇನೆ ಎಂದು ಮಾಜಿ ಶಾಸಕಿ ರವಿವಾರ ಘೋಷಣೆ ಮಾಡಿದ್ದರು.

RELATED ARTICLES  ಜಿಲ್ಲಾ ಕ.ಸಾ.ಪ. ದಿಂದ ಅನುಭವ ಮಂಟಪ ಅಸ್ತಿತ್ವಕ್ಕೆ : ಶಂಕರ ಮುಂಗರವಾಡಿ ಸಂಚಾಲಕರಾಗಿ ನೇಮಕ

ಕುಮಟಾ ಉಪವಿಭಾಗಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರವಿಕುಮಾರ ಶೆಟ್ಟಿ, ಸಂತೋಷ ನಾಯ್ಕ, ರಾಜು ಅಂಬಿಗ, ವಿನು ಕೆ ಜಾರ್ಜ್, ಸುರೇಖಾ ವಾಲೆಕರ್, ಚಂದ್ರಹಾಸ ನಾಯಕ, ವಿಜಯ ವರ್ಣೇಕರ, ಸುನಿಲ ನಾಯ್ಕ, ಕಿರಣ ಹೆಣಿ, ಗಣಪತಿ ಶೆಟ್ಟಿ ಇನ್ನಿತರ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

RELATED ARTICLES  ಕುಮಟಾದ ಬಾಡದಲ್ಲಿ ಶಾರದಾ ಶೆಟ್ಟಿ ಪರ ಪ್ರಚಾರ ನಡೆಸಿದ ಆರ್.ವಿ ದೇಶಪಾಂಡೆ.