ಕುಮಟಾ: ಕುಮಟಾ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ಸಿಗ ಹೊನ್ನಪ್ಪ ನಾಯಕ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಈ ನೇಮಕಕ್ಕಿಂತ ಮೊದಲು ವಿ.ಎಲ್.ನಾಯ್ಕ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಈ ಸಲದ ವಿಧಾನಸಭೆ ಚುನಾವಣೆಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಪಕ್ಷ ಟಿಕೆಟ್ ನೀಡದೆ ನಿವೇದಿತ ಆಳ್ವಾ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಪಕ್ಷ ಶಾರದಾ ಶೆಟ್ಟಿ ಬದಲು ಹೊರಗಿನ ಹಾಗೂ ಅಪರಿಚಿತ ವ್ಯಕ್ತಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಹಾಗೂ ಶಾರದಾ ಶೆಟ್ಟಿ ಅವರನ್ನು ಬೆಂಬಲಿಸಿ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ವಿ.ಎಲ್.ನಾಯ್ಕ ರಾಜೀನಾಮೆ ನೀಡದಂತೆ ಬ್ಲಾಕ್ ಅಡಿಯಲ್ಲಿ ಬರುವ ವಿವಿಧ ಸಮಿತಿಯ ಅಧ್ಯಕ್ಷರು ರಾಜೀನಾಮೆ ನೀಡಿ ಶಾರದಾ ಶೆಟ್ಟಿ ಅವರ ಬೆಂಬಲಕ್ಕಿ ನಿಂತಿದ್ದರು.
ಇವರೆಲ್ಲರ ರಾಜೀನಾಮೆಯಿಂದ ಚುನಾವಣೆಯ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ವಿಸರ್ಜನೆಗೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಹೊನ್ನಪ್ಪ ನಾಯಕ ಅವರನ್ನು ಕುಮಟಾ ಬ್ಲಾಕ್ ಅಧ್ಯಕ್ಷರೆಂದು ನೇಮಿಸಿದ್ದಾರೆ.