ಕುಮಟಾ : ನಾಳೆ (ಏ 19) ಬೆಳಗ್ಗೆ ಬೆಳಗ್ಗೆ 9.30ಕ್ಕೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ ಆಳ್ವಾ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಸಮಯದಲ್ಲಿ ಬೆಳಗ್ಗೆ 9.30ಕ್ಕೆ ಬೃಹತ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್‍ಯಾಲಿಯು ಕುಮಟಾದ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಪ್ರಾರಂಭಗೊಂಡು ಹಳೇ ಬಸ್ ನಿಲ್ದಾಣದ ಮಾರ್ಗವಾಗಿ ಸಾಗಲಿದೆ. ಈ ಮೆರವಣಿಗೆಯಲ್ಲಿ ನನ್ನೊಂದಿಗೆ ತಾವೆಲ್ಲರೂ ಹೆಜ್ಜೆ ಹಾಕಿ, ನಾಮಪತ್ರ ಸಲ್ಲಿಕೆಗೆ ಆಶೀರ್ವದಿಸಿ, ನನ್ನೊಂದಿಗೆ ನಿಲ್ಲಬೇಕು ಎಂದು ನಿವೇದಿತ ಆಳ್ವಾ ಜನತೆಯಲ್ಲಿ ಮನವಿ ಮಾಡಿದ್ದಾರೆ.
ತಾಲೂಕಿನ ಮೂರೂರು ಕ್ರಾಸ್ ಸಮೀಪ ಪಕ್ಷದ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ದೊರೆತಿರುವುದು ನನ್ನ ಭಾಗ್ಯ. ಇದು ಜನರ ಸೇವೆ ಸಲ್ಲಿಸಲು ಸಿಕ್ಕಿರುವ ಅದೃಷ್ಟವೆಂದು ಭಾವಿಸುವೆ. ಕುಮಟಾ-ಹೊನ್ನಾವರ ಅಭಿವೃದ್ಧಿಯ ಪರ್ವ ಇನ್ನಷ್ಟೇ ಪ್ರಾರಂಭವಾಗಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಹೊನ್ನಪ್ಪ ನಾಯ್ಕ, ರತ್ನಾಕರ ನಾಯ್ಕ, ರವಿ ಶೆಟ್ಟಿ ಕವಲಕ್ಕಿ, ಆರ್ ಎಚ್ ನಾಯ್ಕ, ಭುವನ್ ಭಾಗ್ವತ್, ಗಾಯತ್ರಿ ಗೌಡ ಇನ್ನಿತರು ಹಾಜರಿದ್ದರು.