ಕುಮಟಾ : ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೇದಿತ ಆಳ್ವಾ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಚುನಾವಣಾ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ಅವರಿಗೆ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಅವರು ಚುನಾವಣಾ ಕಣಕ್ಕೆ ಧುಮುಕಿದರು.

ಸಹಸ್ರಾರು ಜನರ ಜೊತೆಗೆ ನಿವೇದಿತ್ ರೋಡ್ ಶೋ ಮಾಡುವ ಮೂಲಕ ನಾಮಪತ್ರ ಸಲ್ಲಿಕೆಗೆ ತೆರಳಿದರು. ತಾಲೂಕಿನ ಮೂರೂರಿನ ಕ್ರಾಸ್ ಎದುರಿಗೆ ಇರುವ ಕಾರ್ಯಾಲಯದಿಂದ ಹೊರಟು ನೆಲ್ಲಿಕೇರಿ, ಹಳೇ ಬಸ್ ನಿಲ್ದಾಣ, ಕುಮಟಾ ಪಟ್ಟಣ ಮಾರ್ಗವಾಗಿ ಗಿಬ್ ಸರ್ಕಲ್ ಗೆ ಬಂದು ನಂತರ ಉಪವಿಭಾಗಾಧಿಕಾರಿಗಳ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

RELATED ARTICLES  ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗುವ ತನಕ ನಿರಂತರ ಹೋರಾಟ : ಅನಂತಮೂರ್ತಿ ಹೆಗಡೆ : ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಸರ್ಕಾರಕ್ಕೆ ಅನಂತಮೂರ್ತಿ ಎಚ್ಚರಿಕೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು. ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದರೆ, ರಾಜ್ಯ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆ ಮೂಲಕ 600 ಭರವಸೆಗಳನ್ನು ನೀಡಿ ಅದರಲ್ಲಿ 50 ಭರವಸೆಗಳನ್ನು ಕೂಡ ಈಡೇರಿಸದೆ ವಚನ ಭ್ರಷ್ಟವಾಗಿದೆ.
ಕ್ಷೇತ್ರದ ಮತದಾರರು ಜಾತಿ, ಧರ್ಮ, ಹಣ ಇಂಥ ಯಾವುದೇ ಆಮಿಷಗಳಿಗೆ ಒಳಗಾಗದೆ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

RELATED ARTICLES  ರೂಪಾಲಿ ನಾಯ್ಕ ಬೆಂಬಲಕ್ಕೆ ನಿಂತು ಸ್ಟಾರ್ ಪ್ರಚಾರಕರಾಗಿದ್ದಾರೆ ನ್ಯಾಯವಾದಿ ನಾಗರಾಜ ನಾಯಕ