ಹೊನ್ನಾವರ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಇಂದು ಹೊನ್ನಾವರ ಪಟ್ಟಣದಲ್ಲಿ, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸಂಜು ಶೇಟ್ ಅವರ ಮನೆಗೆ ಭೇಟಿನೀಡಿ ಮಾತುಕತೆ ನಡೆಸಿದರು.

ಹೊನ್ನಾವರದ ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿರುವ ಮೋಹನ ನಾಯಕ ಅವರ ಮನೆಗೆ ಭೇಟಿನೀಡಿ ನಮಸ್ಕರಿಸಿ, ಅವರ ರಾಜಕೀಯ ಅನುಭವದ ನುಡಿಗಳನ್ನು ಆಲಿಸಿದರು.

RELATED ARTICLES  ಶ್ರೀ ನಾರಾಯಣಗುರುಗಳಿಗೆ ಗೌರವ ಕಾರ್ಯಕ್ರಮ ನಾಳೆ.

ಹೊನ್ನಾವರ ಪಟ್ಟಣಪಂಚಾಯತ್ ಮಾಜಿ ಸದಸ್ಯ ಬಾಳಾ ಬಾಳೇರಿ ಅವರ ಮನೆಗೆ ಭೇಟಿನೀಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು. ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿರುವ ಬಾಳಾ ಬಾಳೇರಿ ಅವರು ಶಾಸಕರಿಗೆ ಅಗತ್ಯ ಸಲಹೆಸೂಚನೆಗಳನ್ನು ನೀಡಿದರು.

RELATED ARTICLES  ಭಟ್ಕಳದಲ್ಲಿ ಇಬ್ಬರಿಗೆ ಕರೋನಾ ಸೋಂಕು : ಉ.ಕ ದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ: ಜಿಲ್ಲಾಡಳಿತ ಮಾಹಿತಿ.

ಸಂಜು ಶೇಟ್ ಅವರ ಕುಟುಂಬದ ಸದಸ್ಯರು, ಹೊನ್ನಾವರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯಕ, ಲೋಕೇಶ್ ಮೇಸ್ತ, ಬೂತ್ ಅಧ್ಯಕ್ಷ ರವಿ ಎಮ್. ನಾಯ್ಕ, ಪ. ಪಂ. ಸದಸ್ಯ ಉಲ್ಲಾಸ ನಾಯ್ಕ ಜೊತೆಗಿದ್ದರು.