ಕುಮಟಾ : ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇನ್ನು ಸ್ಟಾರ್ ಪ್ರಚಾರಕರು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಚುನಾವಣಾ ಅಭ್ಯರ್ಥಿಗಳ ಪರವಾಗಿ ಬ್ಯಾಟ್ ಬೀಸಲಿದ್ದಾರೆ. 2023ರ ಚುನಾವಣೆಯ ಪ್ರಚಾರವಾಗಿ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಉತ್ತರ ಕನ್ನಡಜಿಲ್ಲೆಯಲ್ಲಿ ಒಂದು ಚುನಾವಣಾ ರೈಲಿ ನಡೆಸಲಿದ್ದಾರೆ ಎಂದು ಬಿಜೆಪಿ ಪ್ರಮುಖರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕುಮಟಾ ತಾಲೂಕಿನ ಶಿಳ್ಳೆ ಗ್ರಾಮ ಸುಮಾರು 100 ಎಕರೆ ಕ್ಷೇತ್ರ ಇದ್ದು ಈ ಸ್ಥಳದಲ್ಲಿಚುನಾವಣಾ ಪ್ರಚಾರ ಕೈಗೊಳ್ಳಲು ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹಾಗೂ ಜಿಲ್ಲಾಧ್ಯಕ್ಷರು ತಾಲೂಕಾಧ್ಯಕ್ಷರು ಬಿಜೆಪಿ ಪ್ರಮುಖರಾದ ಗಜಾನನ ಪೈ ಜೊತೆಗೆ ಸ್ಥಳ ವೀಕ್ಷಣೆ ಮಾಡಿದ್ದಾಗಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಎನ್ ಎಸ್ ಹೆಗಡೆ ಹಾಗೂ ತಾಲೂಕಾ ಅಧ್ಯಕ್ಷರಾದ ಶ್ರೀ ಹೇಮಂತ್ ಗಾಂವ್ಕರ ಹಾಗೂ ಊರಿನ ಮುಖಂಡರು ಸ್ಥಳದಲ್ಲಿ ಹಾಜರಿದ್ದರು.
ಇನ್ನು ಮೋದಿ ಯಾವಾಗ ಬರುತ್ತಾರೆ? ಯಾವ ರೀತಿಯಲ್ಲಿ ರ್ಯಾಲಿ ಹಮ್ಮಿಕೊಳ್ಳುತ್ತಾರೆ ಎಂದು ಮಾಹಿತಿಗಳು ಪಕ್ಷದಿಂದ ಅಧಿಕೃತವಾಗಿ ತಿಳಿದು ಬರಬೇಕಾಗಿದೆ.