ಕುಮಟಾ : ದಿನೇದಿನೇ ಚುನಾವಣಾ ಕಣ ರಂಗೇರಿತಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಹಾಗೂ ಪರಸ್ಪರ ಒಬ್ಬರಿಗೊಬ್ಬರು ಬೆಂಬಲ ಸೂಚಿಸುವ ಪ್ರಕ್ರಿಯೆಗಳು ಮುಂದುವರೆದಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇಂದು ಕಾಂಗ್ರೆಸ್ ಗೆ ಬಂಡಾಯ ಸಾರಿ ಶಿವಾನಂದ ಹೆಗಡೆ ಕಡತೋಕಾ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ತಮ್ಮ ನಿರ್ಧಾರವನ್ನು ಬದಲಾಯಿಸಿರುವವರು ಇಂದು ನಾಮಪತ್ರ ಸಲ್ಲಿಸದೆ ಪಕ್ಷೇತರ ಅಭ್ಯರ್ಥಿ ಶಾರದಾ ಶೆಟ್ಟಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ಬಲ್ಲಮೂಲಗಳು ತಿಳಿಳಿಸಿದೆ.
ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಕಡತೋಕ ಶಿವಾನಂದ ಹೆಗಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದ ಕಾರಣ ಇಬ್ಬರೂ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವುದಾಗಿ ಈ ಹಿಂದೆ ಹೇಳಿದರು. ಅದೇ ರೀತಿ ಶಾರದಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದು. ಶಿವಾನಂದ ಹೆಗಡೆ ನಾಮಪತ್ರ ಸಲ್ಲಿಸೋದಾಗಿ ಹೇಳಿದ್ದರು.
ಇದೀಗ ತಮ್ಮ ನಿರ್ಧಾರ ಬದಲಾಯಿಸಿದ ಅವರು ನಾಮಪತ್ರ ಸಲ್ಲಿಕೆಗೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ಇದೀಗ ಶಾರದಾ ಶೆಟ್ಟಿ ಅವರ ಜೊತೆ ಬೆಂಬಲ ಸೂಚಿಸಿ ಶಿವಾನಂದ ಹೆಗಡೆ ಮುಂದುವರೆಯಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದ್ದು, ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.