ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ದಿನಕರ ಶೆಟ್ಟಿಯವರು ಶ್ರೀಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಹಾಗೂ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಜೊತೆಗೆ ಗೋಕರ್ಣ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.
ವಾಸ್ಕೊ ಶಾಸಕರಾದ ಕೃಷ್ಣ ಸಾಲ್ಕರ್, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ಎಂ. ಜಿ. ಭಟ್, ಗೋಕರ್ಣ ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ್ ಜನ್ನು, ತೊರ್ಕೆ ಗ್ರಾಮಪಂಚಾಯತ್ ಅಧ್ಯಕ್ಷ ಆನಂದು ಕವರಿ, ನಾಡುಮಾಸ್ಕೇರಿ ಗ್ರಾಮಪಂಚಾಯತ್ ಅಧ್ಯಕ್ಷೆ ಧನಶ್ರೀ ಅಂಕೋಲೆಕರ, ಹನೆಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಭಾರತಿ ಗೌಡ, ಗೋಕರ್ಣ ಮಹಾಶಕ್ತಿಕೇಂದ್ರದ ಅಧ್ಯಕ್ಷ ಚಂದ್ರಶೇಖರ ನಾಯ್ಕ್, ಪಕ್ಷದ ಜಿಲ್ಲಾ ಪ್ರಮುಖರಾದ ಕುಮಾರ ಮಾರ್ಕಾಂಡೆ, ಹಾಲಕ್ಕಿ ಸಮಾಜದ ಮುಖಂಡರಾದ ಗೋವಿಂದ ಗೌಡ, ತಾ. ಪಂ. ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾ. ಪಂ. ಮಾಜಿ ಅಧ್ಯಕ್ಷ ಮೋಹನ ನಾಯಕ, ಮಹಾಶಕ್ತಿಕೇಂದ್ರದ ಕಾರ್ಯದರ್ಶಿ ವಿನಾಯಕ ಕೊಡ್ಲಕೆರೆ, ಮಿರ್ಜಾನ್ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಹೇಶ್ ನಾಯಕ ದೇವರಬಾವಿ, ಪಕ್ಷದ ಜಿಲ್ಲಾ ಕಮಿಟಿಯ ಸದಸ್ಯ ಗಣೇಶ ಪಂಡಿತ್, ಗ್ರಾಮಪಂಚಾಯತ್ ಸದಸ್ಯರು, ಶಕ್ತಿ ಕೇಂದ್ರ ಹಾಗೂ ಬೂತ್ ಕಮಿಟಿ ಅಧ್ಯಕ್ಷರು/ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಜೊತೆಗಿದ್ದರು.