ಹೊನ್ನಾವರ : ತಾಲೂಕಿನ ಕಡ್ಳೆ , ಸಾಲ್ಕೋಡ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಲವು ತಿಂಗಳಿಂದ ಚಿರತೆ ಹಾವಳಿ ಜೋರಾಗಿದ್ದು ಕೆಲವು ವಾಹನ ಪ್ರಯಾಣಿಕರಿಗೆ ತೊಂದರೆಯಾಗಿದ್ದು ಹಲವು ಜಾನುವಾರುಗಳ ಸಾವಾಗಿತ್ತು. ರಾತ್ರಿ ಹೊತ್ತಿನಲ್ಲಿ ಏಕಾಂಗಿಯಾಗಿ ಜನರು ಓಡಾವುದನ್ನೇ ನಿಲ್ಲಿಸಿದ್ದರು. ಅಲ್ಲದೆ ಹಲವು ಮಹಿಳೆಯರು ಕಟ್ಟಿಗೆ, ದರಕು ತರುವ ಕೆಲಸಕ್ಕಾಗಿ ಕಾಡಿಗೆ ಹೋಗುವುದನ್ನೆ ನಿಲ್ಲಿಸಿದ್ದರು. ಅರಣ್ಯ ಇಲಾಖೆಯವರು ಪಂಜರವನ್ನ ಚಿರತೆ ಹಿಡಿಯಲು ತಂದು ಅಳವಡಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಆದರೆ ವಂದೂರಿನ ಜಡ್ಡಿಗದ್ದೆ ಕೇರಿಯ ಸೀತಾರಾಮ ಹೆಗಡೆ, ಪ್ರಕಾಶ್ ಹೆಗಡೆ ಹಾಗು ಕೇರಿಯ ಸ್ಥಳೀಯರು ಛಲ ಬಿಡದೆ ಎರಡು ತಿಂಗಳುಗಳ ಕಾಲ ನಿರಂತರವಾಗಿ ಪಂಜರವನ್ನ ಸ್ಥಳಾಂತರಿಸುತ್ತಾ ಅದರ ಸ್ವಚ್ಚತೆಯನ್ನ ನೋಡಿ ಕೊಂಡು ಪ್ರಯತ್ನ ಪಡುತ್ತಿದ್ದರು. ಅಂತೂ ಎರಡು ತಿಂಗಳ ನಂತರ ಕಪ್ಪು ಚಿರತೆಯೊಂದು ಪಂಜರದಲ್ಲಿ ಸೆರೆಯಾಗಿದೆ. ವಂದೂರು ಜಡ್ಡಿಗದ್ದೆ ಕೇರಿಯ ಸ್ಥಳೀಯರ ಪರಿಶ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.