ಕುಮಟಾ: ತಾಲ್ಲೂಕಿನ ವಿಧಾತ್ರಿ ಅಕಾಡೆಮಿಯು ಕೊಂಕಣ ಎಜುಕೇಷನ್ ಟ್ರಸ್ಟ್ ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಸಹಭಾಗಿತ್ವವನ್ನು ಹೊಂದಿದ ನಂತರ ಸತತವಾಗಿ ಮೂರನೇ ವರ್ಷವೂ ರಾಜ್ಯ ಮಟ್ಟದ ಸ್ಥಾನದೊಂದಿಗೆ ಪರೀಕ್ಷೆಗೆ ಹಾಜರಾದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುವುದರ ಮೂಲಕ ಪ್ರತಿಶತ ನೂರಕ್ಕೆ ನೂರು ಫಲಿತಾಂಶವನ್ನು ನೀಡಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕು. ರಂಜನಾ ಮಡಿವಾಳ ೫೮೮ (೯೮%) ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೯ ನೇ ಸ್ಥಾನ ಪಡೆಯುವುದರ ಮುಖಾಂತರ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಕು. ಶ್ರೀನಂದಾ ದಿಂಡೆ ೫೮೬ (೯೭.೬೭%) ಅಂಕ ಪಡೆದು ದ್ವಿತೀಯ ಸ್ಥಾನ, ಕು. ಪ್ರಾಪ್ತಿ ನಾಯಕ ೫೮೫ (೯೭.೫%) ಅಂಕ ಹಾಗೂ ಕು. ಶ್ರೀಜನಿ ಭಟ್ ೫೮೫ (೯೭.೫%) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ ವಿಜ್ಞಾನ ವಿಭಾಗದ ೧೦೪ ವಿದ್ಯಾರ್ಥಿಗಳಲ್ಲಿ ೧೮ ವಿದ್ಯಾರ್ಥಿಗಳು ಶೇಕಡಾ ೯೫ಕ್ಕಿಂತ ಹೆಚ್ಚು ಅಂಕ ಪಡೆದು, ೨೬ ವಿದ್ಯಾರ್ಥಿಗಳು ಶೇಕಡಾ ೯೦ಕ್ಕಿಂತ ಹೆಚ್ಚು ಅಂಕ ಪಡೆದು ಮತ್ತು ೨೨ ವಿದ್ಯಾರ್ಥಿಗಳು ಶೇಕಡಾ ೮೫ಕ್ಕಿಂತ ಹೆಚ್ಚು ಅಂಕ ಪಡೆದು ಒಟ್ಟು ೬೬ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಹಾಗೂ ೩೬ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

RELATED ARTICLES  ಅಂಕೋಲಾ ಪೊಲೀಸ್ ಠಾಣೆಯಿಂದ “ ಮಾದರಿ ಗಣೇಶೋತ್ಸವ ಅವಾರ್ಡ “ ಪರಿಸರ ಸ್ನೇಹಿ, ಸಮಾಜಮುಖಿ ಸಮಿತಿಗೆ ಪ್ರಶಸ್ತಿಯ ಗರಿ ನೀಡಲು ತಿರ್ಮಾನ.
Vidhatri 2

ವಾಣಿಜ್ಯ ವಿಭಾಗದಲ್ಲಿ ಕು. ಶ್ರೀಲಕ್ಷ್ಮಿ ಶೆಟ್ಟಿ ೫೮೮ (೯೮%) ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೧೦ ನೇ ಸ್ಥಾನ ಪಡೆಯುವುದರ ಮುಖಾಂತರ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಕು. ಮೇಹರ್ಸೈಯದ್ ೫೮೧ (೯೬.೮೩%) ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಕು. ರೋಶನಿ ನಾಯಕ ೫೮೦ (೯೬.೬೭%) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ ವಾಣಿಜ್ಯ ವಿಭಾಗದ ೨೧ ವಿದ್ಯಾರ್ಥಿಗಳಲ್ಲಿ ೧೫ ವಿದ್ಯಾರ್ಥಿಗಳು ಶೇಕಡಾ ೮೫ ಕ್ಕಿಂತ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಹಾಗೂ ೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

RELATED ARTICLES  ಸಮಾಜ ಅಭಿವೃದ್ಧಿಯಾಗಬೇಕಾದರೆ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು : ಮಂಕಾಳ ವೈದ್ಯ.
VIDHATRI20231

ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಶ್ವಸ್ಥರುಗಳು, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಶ್ರೀ. ಗುರುರಾಜ ಶೆಟ್ಟಿಯವರು, ಪ್ರಾಂಶುಪಾಲರಾದ ಶ್ರೀ. ಕಿರಣ ಭಟ್ಟ, ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ಹೆಗಡೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

Vidhatri 2