ಕುಮಟಾ : ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿಯ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು ೨೪೭ ವಿದ್ಯಾರ್ಥಿಗಳಲ್ಲಿ ೨೨೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ ೯೨.೩೦% ಫಲಿತಾಂಶ ದಾಖಲಾಗಿದೆ. ಕಾಲೇಜಿನ ಮೂರು ಸಂಯೋಜನೆಗಳಲ್ಲಿ ಒಟ್ಟೂ ೨೬ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

ಕಲಾ ವಿಭಾಗದಲ್ಲಿ ೧೦೯ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಒಟ್ಟು ೧೦೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ ೯೭.೨೪ ಫಲಿತಾಂಶ ದಾಖಲಾಗಿದೆ. ಪ್ರಥಮ ಸ್ಥಾನವನ್ನು ಕುಮಾರ ಎಂ. ದರ್ಶನ ೫೬೦ ಅಂಕಗಳೊಂದಿಗೆ ಶೇ ೯೩.೩೩ ಫಲಿತಾಂಶ, ದ್ವಿತೀಯ ಸ್ಥಾನ ಕುಮಾರ ವಿಶಾಲ ರಾಮಚಂದ್ರ ಗೌಡ ೫೪೨ ಅಂಕಗಳೊಂದಿಗೆ ಶೇ. ೯೦.೩೩ ಫಲಿತಾಂಶ, ಹಾಗೂ ತೃತೀಯ ಸ್ಥಾನ ಕುಮಾರಿ ಕುಮುದಾ ಗಣಪತಿ ಗೌಡ ೫೩೫ ಅಂಕಗಳೊಂದಿಗೆ ಶೇ. ೮೯.೧೬ ಫಲಿತಾಂಶ ಪಡೆದಿರುತ್ತಾರೆ.

RELATED ARTICLES  ಕಾರ್ಮಿಕ ಇಲಾಖೆಯ ವತಿಯಿಂದ ನೀಡಲ್ಪಡುವ ಅಗತ್ಯ ದಿನಸಿ ಕಿಟ್‍ ವಿತರಿಸಿದ ದಿನಕರ‌ ಶೆಟ್ಟಿ

ವಾಣಿಜ್ಯ ವಿಭಾಗದಲ್ಲಿ ೧೦೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು ೮೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದು, ಶೇಕಡಾ ೮೬ ಫಲಿತಾಂಶ ದಾಖಲಾಗಿದೆ. ಪ್ರಥಮ ಸ್ಥಾನವನ್ನು ಕುಮಾರಿ ಶೃತಿ ಸುಧಾಕರ ಭಂಡಾರಿ ೫೮೧ ಅಂಕಗಳೊಂದಿಗೆ ಶೇ ೯೬.೮೩ ಫಲಿತಾಂಶ,. ದ್ವಿತೀಯ ಸ್ಥಾನ ಕುಮಾರಿ ದೀಪಿಕಾ ವೆಂಕಟ್ರಮಣ ಗಾವಡಿ ೫೭೮ ಅಂಕಗಳೊಂದಿಗೆ ಶೇ. ೯೬.೩೩ ಫಲಿತಾಂಶ ಹಾಗೂ ತೃತೀಯ ಸ್ಥಾನ ಕುಮಾರಿ ನಾಗಶ್ರೀ ನಾಗಪ್ಪ ಗೌಡ ೫೬೭ ಅಂಕಗಳೊ.ದಿಗೆ ಶೇ. ೯೪.೫ ಫಲಿತಾಂಶ ಪಡೆದಿರುತ್ತಾರೆ.

RELATED ARTICLES  ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದಿಂದ ಅಪಘಾತ ಪರಿಹಾರ ನಿಧಿಯ ವಿತರಣೆ

ವಿಜ್ಞಾನ ವಿಭಾಗದಲ್ಲಿ ೩೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು ೩೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ ೯೫ ಫಲಿತಾಂಶ ದಾಖಲಾಗಿದೆ. ಪ್ರಥಮ ಸ್ಥಾನ ಕುಮಾರಿ ಅನನ್ಯಾ ಸುರೇಶ ನಾಯಕ ೫೬೦ ಅಂಕಗಳೊಂದಿಗೆ ಶೇ. ೯೩.೩೩ ಫಲಿತಾಂಶ, ದ್ವಿತೀಯ ಸ್ಥಾನ ಕುಮಾರಿ ಪ್ರತೀಕಾ ಚಂದ್ರಕಾAತ ನಾಯ್ಕ ೫೪೯ ಅಂಕಗಳೊಂದಿಗೆ ಶೇ. ೯೧.೫ ಫಲಿತಾಂಶ ಹಾಗೂ ತೃತೀಯ ಸ್ಥಾನ ಕುಮಾರ ಓಂಕಾರ ಜನಾರ್ಧನ ಶಾನಭಾಗ ೫೪೪ ಅಂಕಗಳೊಂದಿಗೆ ಶೇ.೯೦.೬೬% ಫಲಿತಾಂಶ ಪಡೆದಿರುತ್ತಾರೆ.

ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಹಾಗೂ ಊರ ನಾಗರಿಕರು ಅಭಿನಂದಿಸಿರುತ್ತಾರೆ.