ಕುಮಟಾ : ಗೋಕರ್ಣದ ಅಶೋಕೆಯಲ್ಲಿ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರನ್ನು ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಭೇಟಿ ಮಾಡಿ ಅವರ ದಿವ್ಯಾಶೀರ್ವಾದ ಪಡೆದರು.
ಕಳೆದ ಹತ್ತು ವರ್ಷಗಳಿಂದ ತಾನೂ ನಡೆಸಿಕೊಂಡು ಬಂದ ಹೋರಾಟದ ಕುರಿತಾಗಿ ಶ್ರೀಗಳಿಗೆ ವಿವರಿಸಿದ ಸೋನಿ, ಈ ಚುನಾವಣೆ ನಿರ್ಣಾಯಕವಾಗಿದ್ದು ಗುರುಗಳ ಆಶೀರ್ವಾದ ಇರಲೆಂದು ಪ್ರಾರ್ಥಿಸಿದರು. ಹವ್ಯಕ ಸಮಾಜದವರಿಗೆ ಎಂದು ತೊಂದರೆ ಆಗದಂತೆ ನಾನು ಇದುವರೆಗೆ ನಡೆದುಕೊಂಡಿದ್ದು, ಇನ್ನು ಮುಂದೆಯೂ ಅದೇ ರೀತಿ ನಡೆದುಕೊಳ್ಳುವುದಾಗಿ ಶ್ರೀಗಳಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸೂರಜ್ ನಾಯ್ಕ ಸೋನಿಯವರ ಮಡದಿ ವೀಣಾ ಸೂರಜ್, ಜೆಡಿಎಸ್ ಪ್ರಮುಖರಾದ ಎಸ್.ಜಿ ಹೆಗಡೆ ಹಾಗೂ ಇತರ ಸೂರಜ್ ನಾಯ್ಕ ಸೋನಿ ಕಾರ್ಯಕರ್ತರು ಜೊತೆಗಿದ್ದರು.