ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಇಂದು ಕುಮಟಾ ತಾಲೂಕಿನ ಪೋಸ್ಟ್ ಬೆಟ್ಕುಳಿಯ ದುರ್ಗಾದೇವಿ ಮಂದಿರದ ವರ್ಧಂತಿ ಉತ್ಸವದನಿಮಿತ್ತ ದೇವಿಗೆ ಪೂಜೆಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಶೇಖರ್ ಹರಿಕಂತ್ರ, ಪಟಗಾರ್ ಸಮಾಜದ ಅಧ್ಯಕ್ಷ ಸುಬ್ರಾಯ ಪಟಗಾರ, ಪಂಚಾಯತ್ ಸದಸ್ಯ ವಿಟೋಬ ಗಾವಡಿ, ಸ್ಥಳೀಯ ಪ್ರಮುಖರಾದ ಗುಂಡು ಪಟಗಾರ, ಬುದುವಂತ ಪಟಗಾರ, ನೀಲಪ್ಪ ಪಟಗಾರ, ವಸಂತ್ ಪಟಗಾರ, ಮೋಹನ್ ಪಟಗಾರ, ಅಚ್ಯುತ್ ಗಾವಡಿ, ಹರೀಶ್ ಗಾವಡಿ ಸೇರಿದಂತೆ ಬೆಟ್ಕುಳಿ ಹಾಗೂ ಪೋಸ್ಟ್ ಬೆಟ್ಕುಳಿ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡರು.