ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾಪಾರ್ಟಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಇಂದು ಕೂಜಳ್ಳಿ ಹಾಗೂ ವಾಲಗಳ್ಳಿ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿಯವರು ಕೂಜಳ್ಳಿ ಹಾಗೂ ವಾಲಗಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಐದುವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನೆರವೇರಿವೆ. 50.00ಲಕ್ಷ ರೂ. ವೆಚ್ಚದಲ್ಲಿ ಕೂಜಳ್ಳಿಯಲ್ಲಿ ಭವ್ಯವಾದ ರೈತಸಂಪರ್ಕಕೇಂದ್ರ ನಿರ್ಮಾಣಗೊಂಡಿದೆ. ಗಿಬ್ ಸರ್ಕಲ್ ನಿಂದ ಸಂತೆಗುಳಿವರೆಗೆ ಅತ್ಯುತ್ತಮವಾದ ರಸ್ತೆ ನಿರ್ಮಾಣವಾಗಿದೆ. ವಾಲಗಳ್ಳಿ ಯಿಂದ ಅಬ್ಬಿ ರಸ್ತೆ 20.00ಲಕ್ಷ, ವಾಲಗಳ್ಳಿಯಿಂದ ಕೋಟೆಗುಡ್ಡೆಗೆ ಹೋಗುವ ರಸ್ತೆ 20.00ಲಕ್ಷ, ಬಲ್ಲಾಳಮಕ್ಕಿ-ಕಲ್ಕೇರಿ ರಸ್ತೆ 3.00ಲಕ್ಷ, ವಾಲಗಳ್ಳಿ ಹಾಗೂ ಊರಕೇರಿ ಹಿ. ಪ್ರಾ. ಶಾಲೆಗೆ ಎರಡು ವಿವೇಕ ಕೊಠಡಿಗಳು ಸೇರಿದಂತೆ ಈ ಭಾಗಕ್ಕೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸರ್ಕಾರ ಅನುದಾನವನ್ನು ಒದಗಿಸಿದೆ ಎಂದು ಹೇಳಿದರು.

RELATED ARTICLES  ಕೊಂಕಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಸಂಚಾಲಕರಾದ ಎಮ್. ಜಿ. ಭಟ್, ವಾಲಗಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ ಶಾನಭಾಗ, ಶಕ್ತಿಕೇಂದ್ರದ ಅಧ್ಯಕ್ಷರಾದ ನಾಗಪ್ಪ ಗೌಡ ಮತ್ತು ಸುಬ್ರಾಯ ಶಾನಭಾಗ, ಊರಿನ ಗೌಡರಾದ ಮಾದೇವ ಗೌಡ, ಪಂಚಾಯತ್ ಸದಸ್ಯರುಗಳಾದ ಶ್ರೀಕಾಂತ ಶಾಸ್ತ್ರೀ, ಆಶಾ ಗಾಡಿಗ, ರಾಮ ಗೌಡ, ಲಕ್ಷ್ಮಿ ನಾಯ್ಕ್, ವೆಂಕಟೇಶ್ ನಾಯ್ಕ್, ಸ್ಥಳೀಯ ಪ್ರಮುಖರಾದ ಸುಬ್ರಾಯ ಶಾನಭಾಗ, ಎಂ. ಎಸ್. ಭಟ್, ಕುಮಾರ ಕವರಿ, ಕೆ. ಪಿ. ಹೆಗಡೆ, ಬೂತ್ ಕಮಿಟಿ ಅಧ್ಯಕ್ಷರು/ಸದಸ್ಯರು, ಪೇಜ್ ಪ್ರಮುಖರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES  "ಸೆಲ್ಫಿ ವಿತ್ ಗಣೇಶ' ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ