ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಇಂದು ಕುಮಟಾದ ನೆಹರು ನಗರದಲ್ಲಿ, ಪುರಸಭಾ ಸದಸ್ಯ ಹಾಗೂ ಶಕ್ತಿಕೇಂದ್ರದ ಪ್ರಮುಖ ತುಳಸುಗೌಡ ಅವರ ಮನೆಯಲ್ಲಿ ಬೂತ್ ಸಂಖ್ಯೆ 91, 93 ಹಾಗೂ 94ರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.
ಗೋವಾ ರಾಜ್ಯದ ವಾಸ್ಕೋ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ದಾಜಿ ಸಾಲ್ಕರ್, ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಮಂಡಲದ ಪ್ರಭಾರಿ ಶಿವಾನಿ ಶಾಂತಾರಾಮ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಸಾದ ನಾಯಕ ಹಾಗೂ ಕಾರ್ಯದರ್ಶಿ ಮನೋಹರ ನಾಯ್ಕ್, ಕ್ಷೇತ್ರದ ಚುನಾವಣಾ ಸಹಪ್ರಭಾರಿ ಅಶೋಕ ಪ್ರಭು, ಪುರಸಭಾ ಸದಸ್ಯರಾದ ಮೋಹಿನಿ ಗೌಡ, ಜಯಾ ಶೇಟ್, ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರು ಹಾಗೂ ಪಕ್ಷದ ಅಭಿಮಾನಿಗಳು ಸೇರಿದ್ದರು.