ಕುಮಟಾ : ಚುನಾವಣೆಯ ಸಂದರ್ಭದಲ್ಲಿ ಮಾತ್ರ ಪ್ರತ್ಯಕ್ಷರಾಗುವ ಜನರ ಬಗ್ಗೆ ಜಾಗೃತರಾಗಿರಬೇಕು ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ದಿನಕರ ಶೆಟ್ಟಿಯವರು ಹೇಳಿದರು. ತಾಲೂಕಿನ ಹೆಗಡೆ ಮಹಾಶಕ್ತಿಕೇಂದ್ರದ ಕಾಗಾಲದ ಬೂತ್ ಸಂಖ್ಯೆ 42, 43, 44 ಮತ್ತು 45 ರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ 1,800ಕೋಟಿಗೂ ಅಧಿಕ ಅನುದಾನವನ್ನು ಒದಗಿಸಿದೆ. ನಿಮ್ಮ ಗ್ರಾಮದಲ್ಲಿ ರಸ್ತೆಗಳ ಅಭಿವೃದ್ಧಿ, ಗುಡಕಾಗಾಲ ಶಾಲೆಗೆ ಎರಡು ವಿವೇಕ ಕೊಠಡಿಗಳ ನಿರ್ಮಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನಿಮ್ಮಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಪ್ರವಾಹ, ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಗಳಲ್ಲಿ ಸೇರಿದಂತೆ ನಾವು ಸದಾಕಾಲ ನಿಮ್ಮೊಂದಿಗಿದ್ದೇವೆ ಎಂದು ದಿನಕರ ಶೆಟ್ಟಿ ಹೇಳಿದರು.
ಚುನಾವಣಾ ಪ್ರಭಾರಿ ಎಮ್. ಜಿ. ಭಟ್ ಮಾತನಾಡಿ, ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ, ದಿನಕರ ಶೆಟ್ಟಿಯವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಬಹುಮತದಲ್ಲಿ ಆಯ್ಕೆ ಮಾಡುವಂತೆ ವಿನಂತಿಸಿದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ವಾಸ್ಕೊ ಶಾಸಕ ಕೃಷ್ಣ ದಾಜಿ ಸಾಲ್ಕರ್, , ಜಿಲ್ಲಾ ಪ್ರಮುಖರಾದ ಗಜಾನನ ಗುನಗಾ, ವಿನೋದ ಪ್ರಭು, ಮಹಾಶಕ್ತಿಕೇಂದ್ರದ ಅಧ್ಯಕ್ಷ ಯೋಗೇಶ್ ಪಟಗಾರ, ಕಾರ್ಯದರ್ಶಿ ಮಹಾಬಲೇಶ್ವರ ನಾಯ್ಕ, ಶಕ್ತಿಕೇಂದ್ರ ಪ್ರಮುಖ್ ಲಕ್ಷ್ಮಣ ಹರಿಕಾಂತ, ಮಂಡಲದ ಉಪಾಧ್ಯಕ್ಷ ಬಿ. ಡಿ. ಪಟಗಾರ ಹಾಗೂ ವಿನಾಯಕ ಭಟ್, ಪಂಚಾಯತ್ ಸದಸ್ಯರಾದ ಪುರುಷೋತ್ತಮ್ ಬೀರಕೋಡಿ, ಲಕ್ಷ್ಮಿ ಎಮ್.ನಾಯ್ಕ್, ನಿಧಿ ಉಮೇಶ ದೇಶಭಂಡಾರಿ, ಬೂತ್ ಅಧ್ಯಕ್ಷರುಗಳಾದ ಶೇಖರ ಉಮೇಶ ಭಂಡಾರಿ, ಮಹಾಬಲೇಶ್ವರ ಬೀರಕೋಡಿ, ದಯಾನಂದ ಗೌಡ ಮತ್ತು ಬಾಬು ಪಟಗಾರ, ಬೂತ್ ಕಮಿಟಿ ಸದಸ್ಯರು, ಪೇಜ್ ಪ್ರಮುಖರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.