ಕುಮಟಾ : ದುಡ್ಡಿನ ಚೀಲ ಹಿಡಿದು ಬಂದು ನಮ್ಮ ಜನರನ್ನು ಖರೀದಿಸಿ ಓಟು ತಗೊಂಡು ಶಾಸಕನಾಗಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದಾರೆ ಆದರೆ ಅದಕ್ಕೆಲ್ಲ ನಮ್ಮ ಕ್ಷೇತ್ರದ ಜನ ಮಣೆ ಹಾಕುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ತಿಳಿಸಿದರು. ಅವರು ಅಘನಾಶಿನಿ ಕಾಗಾಲ ಬಾಡ ಹೊಲನಗದ್ದೆ ಭಾಗದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಈ ಕ್ಷೇತ್ರದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಅನುದಾನವನ್ನು ನಮ್ಮ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಯವರ ಸಹಕಾರ ದಿಂದ ತಂದು ಸಾಕಷ್ಟು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇನೆ.. ಎಲ್ಲ ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ, ದೀಪ, ನೀರಿನ ವ್ಯವಸ್ಥೆ, ಶಾಲೆಗಳಿಗೆ ಹೊಸ ಕಟ್ಟಡ, ಸೇತುವೆ ಹಾಗೂ ಕುಮಟಾ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ವಿವಿಧ ಮಂತ್ರೋಪಕರಣ ದೊಂದಿಗೆ ಸುಸಜ್ಜಿತ ಗೊಳಿಸಲಾಗಿದೆ..
ಬಹು ಜನರ ಅಪೇಕ್ಷೆ ಯಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ಅಧಿವೇಶನದಲ್ಲೂ ಪ್ರಸ್ತಾಪ ಮಾಡಿ ಬಜೆಟ್ ನಲ್ಲಿ ಘೋಷಣೆ ಆಗಿದೆ ಜಾಗವನ್ನೂ ಗುರುತಿಸಲಾಗಿದೆ ನೀವು ನನ್ನ ಇನ್ನೊಮ್ಮೆ ಗೆಲ್ಲಿಸಿ ಆಸ್ಪತ್ರೆಯನ್ನು ಮಾಡಿಸೋದು ನನ್ನ ಜವಾಬ್ದಾರಿ ಇದೆ ಮಾಡಿಸುತ್ತೇನೆ.. ಬಹುಗ್ರಾಮ ಯೋಜನೆ ಅಡಿಯಲ್ಲಿ ಕತಗಾಲದ ಅಳಕೊಡದಿಂದ 13 ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಟೆಂಡರ್ ಕೂಡ ಮಾಡಿಸಿ ಶಂಕುಸ್ಥಾಪನೆ ನೆರವೇಸಿದ್ದೇವೆ ಇನ್ನು ಎರಡು ವರ್ಷಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿದು ನಿಮ್ಮ ಮನೆ ಬಾಗಿಲಿಗೆ ನೀರಿನ ವ್ಯವಸ್ಥೆ ಆಗುತ್ತದೆ ಆದ್ದರಿಂದ ಇಷ್ಟೆಲ್ಲ ಅಭಿವೃದ್ಧಿ ಕಾರ್ಯ ಮಾಡಿರೋದರಿಂದ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರತಿದಿನ ಸ್ಪಂದಿಸಿದ್ದರಿಂದ 10 ನೇ ತಾರಿಕಿನ ದಿನ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ಕಮಲದ ಗುರುತಿಗೆ ಮತನೀಡಿ ನನ್ನನ್ನು ಮತ್ತೊಮ್ಮೆ ಗೆಲ್ಲಿಸಿ ಸದಾ ನಿಮ್ಮ ಸೇವೆ ಮಾಡುತ್ತೇನೆ ಎಂದು ವಿನಂತಿಸಿದರು..

RELATED ARTICLES  ಜೇನು ಕೃಷಿ ವಿಸ್ತರಿಸಬೇಕಾದ ಅಗತ್ಯತೆ ಇದೆ : ಡಾ.ಡಿ.ಎಲ್.ಮಹೇಶ್ವರ


ಬಿಜೆಪಿ ಚುನಾವಣಾ ಸಂಚಾಲಕರಾದ ಎಮ್ ಜಿ ಭಟ್ಟ ಮಾತನಾಡಿ ಮೊದಿಯವರು ಈ ದೇಶವನ್ನು ಅತ್ಯಂತ ಎತ್ತರದ ಸ್ಥಾನಕ್ಕೆ ಕೊಂಡೊಯ್ದು ಇಡೀ ವಿಶ್ವದಲ್ಲಿ ನಮ್ಮ ದೇಶ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಹಿಂದುತ್ವದ ರಕ್ಷಣೆಗಾಗಿ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮೊದಿಯವರು ಪಣ ತೊಟ್ಟಿದ್ದಾರೆ ಅವರಿಗೆ ನಾವೆಲ್ಲ ಕೈ ಜೋಡಿಸಿ ಬಿಜೆಪಿ ಯನ್ನು ಮೋದಿಯವರ ನ್ನು ಬೆಂಬಲಿಸಬೇಕಿದೆ.. ಕುಮಟಾ ಹೊನ್ನಾವರ ಕ್ಷೇತ್ರ ಹಿಂದುತ್ವದ ನೆಲೆಯಿರುವ ಕ್ಷೇತ್ರ.. ಬಹಳಷ್ಟು ಜನ ಆಡ್ಕೊತಾರೆ ಕಾಂಗ್ರೆಸ್ ನಲ್ಲಿ ಅವರು ಬಂದಿದಾರೆ ಮತ್ತೊಂದು ಪಕ್ಷದಲ್ಲಿ ಮತ್ತೊಬ್ಬರು ಬಂದಿದಾರೆ ದುಡ್ಡಿನ ಹೊಳೆಯೇ ಹರಿಸ್ತಾರೆ ಅಂತೆಲ್ಲಾ ಆದರೆ ಅದೆಲ್ಲ ಗಾಳಿ ಸುದ್ದಿ ಅದೆಲ್ಲ ಗಟ್ಟಿಯಾಗಿ ನಿಲ್ಲೋದಲ್ಲ ಗಟ್ಟಿ ಆಗಿ ನಿಲ್ಲೋದು ಒಂದೇ ನಮ್ಮ ಹಿಂದುತ್ವ ಹಾಗೂ ನಮ್ಮ ಭಾರತ ದೇಶಪ್ರೇಮ.. ಈ ಹಿಂದುತ್ವವನ್ನು ಹೃದಯದಲ್ಲಿ ಇಟ್ಟುಕೊಂಡಿರುವ ನಮ್ಮ ಮತದಾರರನ್ನು ನಮ್ಮ ಕಾರ್ಯಕರ್ತರನ್ನು ಬದಲಾಯಿಸಲು ಸಾಧ್ಯವಿಲ್ಲ ಇದನ್ನು ಇತಿಹಾಸ ತೋರಿಸಿಬಿಟ್ಟಿದೆ.
ಹಾಗಾಗಿ ಹಿಂದುತ್ವದ ರಕ್ಷಣೆಗಾಗಿ ನಮ್ಮ ಬಿಜೆಪಿಯ ಶಾಸಕರಾಗುವುದು ಅತ್ಯವಶ್ಯಕ. ನಮ್ಮ ಅಭ್ಯರ್ಥಿ ದಿನಕರ ಶೆಟ್ಟಿ ಯವರು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಮ್ಮೆಲ್ಲರ ಸಮಸ್ಯೆಗಳಿಗೆ ಐದು ವರ್ಷಗಳಿಂದ ಸ್ಪಂದಿಸಿ ಪರಿಹಾರ ನೀಡಿದ್ದಾರೆ. ಜನರ ಆರೋಗ್ಯ ರಕ್ಷಣೆಗೆ ಸಾಕಷ್ಟು ಒತ್ತು ನೀಡಿದ್ದಾರೆ ಶಿಕ್ಷಣ ಕ್ಷೇತ್ರದಲ್ಲಿಯೂ ಉತ್ತಮ ಕೊಡುಗೆ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಉಳಿದಿರುವ ಸಾಕಷ್ಟು ಅಭಿವೃದ್ಧಿ ಕಾರ್ಯ ಮುಂದುವರೆಸಲಿದ್ದಾರೆ ಹಾಗಾಗಿ ಬರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತನೀಡಿ ದಿನಕರ ಶೆಟ್ಟಿ ಯವರನ್ನು ಹಿಂದಿನ ದಾಖಲೆಯ ಗೆಲುವಿನಂತೆ ಮತ್ತೊಮ್ಮೆ ಗೆಲ್ಲಿಸಬೇಕಿದೆ ಎಂದರು..
ಹೆಗಡೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಪಟಗಾರ ಎಲ್ಲರನ್ನೂ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು

RELATED ARTICLES  ತೊರ್ಕೆ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ