ಕುಮಟಾ : ಚುನಾವಣಾ ಚಟುವಟಿಕೆಗಳು ಚುರುಕಾಗುತ್ತಿದ್ದು, ಪಕ್ಷದ ಮುಖಂಡರಗಳ ಭೇಟಿಯೂ ಜೋರಾಗಿದೆ.ಮಂಗಳವಾರ ಕುಮಟಾದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಭೇಟಿನೀಡಿ, ಚುನಾವಣಾ ಕಾರ್ಯಚಟುವಟಿಕೆಗಳನ್ನು ಅವಲೋಕಿಸಿದರು. ಅವರನ್ನು ಕಾಂಗ್ರೆಸ್ಸ್ ಪಕ್ಷದ ಕುಮಟಾ ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ನಿವೇದಿತ್ ಆಳ್ವಾ ಇವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೇದಿತ್ ಆಳ್ವಾ ಹಿರಿಯ ಅನುಭವಿ ನಾಯಕರಾದ ಹರಿಪ್ರಸಾದ್ ಅವರ ಭೇಟಿಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಇವರೆಲ್ಲರ ಮಾರ್ಗದರ್ಶನದಲ್ಲಿ ಕುಮಟಾ – ಹೊನ್ನಾವರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ಸ್ ಕಮಿಟಿಯ ಅಧ್ಯಕ್ಷರಾದ ಸಾಯಿ ಗಾಂವ್ಕರ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಶರಾದ ಹೊನ್ನಪ್ಪ ನಾಯಕ, ನಾಗೇಶ ನಾಯಕ ಕಾಗಲ, ಆರ್ ಎಚ್ ನಾಯಕ, ನಾಗರಾಜ ನಾಯ್ಕ ಚಿತ್ರಿಗಿ, ಭುವನ ಭಾಗವತ್,ಮಂಜುನಾಥ್ ನಾಯ್ಕ, ಕೆಪಿಸಿಸಿ ಸಂಯೋಜಕರಾದ ನಾಗರಾಜ ಮಡಿವಾಳ ಹಾಗೂ ಪಕ್ಷದ ಹಿರಿ ಕಿರಿಯ ಮುಖಂಡರು ಉಪಸ್ಥಿತರಿದ್ದರು.