ಕುಮಟಾ : ಇಂದು ಜಾತ್ಯತೀತ ಜನತಾದಳ ಮಿರ್ಜಾನ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಪಿ.ಎಲ್.ಡಿ ಬ್ಯಾಂಕ್ ಸದಸ್ಯರು ಹಾಗೂ ಬಿಜೆಪಿ ಮುಖಂಡರಾದ ರೋಷನ್ ನಾಯ್ಕ್,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ್ ನಾಯ್ಕ್, ಬಿಜೆಪಿ ಬೂತ್ ಅಧ್ಯಕ್ಷರಾದ ರಾಜೇಶ್ ನಾಯ್ಕ್,ಬಿಜೆಪಿಯ ಕಾರ್ಯಕರ್ತ ಸುಬ್ರಾಯ ಪಟಗಾರ,ಕಾಂಗ್ರೆಸಿನ ಸದಸ್ಯರಾದ ರವಿ ಪಟಗಾರ,ನಿವೃತ್ತ ಸೈನಿಕರಾದ ಗಣೇಶ ಲಿಂಗಪ್ಪ ನಾಯ್ಕ್ ಹಾಗೂ ಇನ್ನಿತರ ಸಂಗಡಿಗರೊಂದಿಗೆ ನೂರಾರು ಸಂಖ್ಯೆಯಲ್ಲಿ ನನ್ನ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಆದರು. ಈ ಸಮಯದಲ್ಲಿ ಜಾತ್ಯತೀತ ಜನತಾದಳದ ಕುಮಟಾ ತಾಲೂಕ ಘಟಕದ ಅಧ್ಯಕ್ಷರಾದ ಸಿ ಜಿ ಹೆಗಡೆ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಈಶ್ವರ ನಾಯ್ಕ, ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಾ ಮುಕ್ರಿ, ಜಾತ್ಯತೀತ ಜನತಾದಳಾದ ಕುಮಟಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ದತ್ತಾ ಪಟಗಾರ, ಕೋಡ್ಕಣಿ ಗ್ರಾಮ್ ಪಂಚಾಯತ್ ಅಧ್ಯಕ್ಷ ರಾಜೇಶ ಪಟಗಾರ, ಪರಮೇಶ್ವರ ಗುನಗಾ, ಮುರ್ಕುಂಡಿ ನಾಯ್ಕ್, ಚಿನ್ನು ಅಂಬಿಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES  ಗ್ಯಾರೇಜ್ ಗೆ ಬಿತ್ತು ಬೆಂಕಿ: ಅಂಕೋಲಾದಲ್ಲಿ ನಡೆಯಿತು ದುರ್ಘಟನೆ.