ಅತ್ಯಂತ ವಿಶೇಷ ರುಚಿಯ ಹಾಗೂ ಬಾಯಲ್ಲಿ ನೀರು ತರಿಸುವಂತಹ ಗುಣದ ದಾವಣಗೆರೆ ಬೆಣ್ಣೆ ದೋಸೆ ಎಲ್ಲರಿಗೂ ಇಷ್ಟ.ಈಗ ದಾವಣಗೆರೆಯ ಸವಿ ಸವಿಯಾದ ಬೆಣ್ಣೆ ದೋಸೆಯನ್ನು ಸವಿಯಲು ಉತ್ತರಕನ್ನಡಿಗರು ದಾವಣಗೆರೆಯವರೆಗೆ ಹೋಗುವ ಅಗತ್ಯವಿಲ್ಲ. ಕುಮಟಾದಲ್ಲಿಯೂ ಅದೇ ರುಚಿಯ ವಿವಿಧ ವಿಧದ ದಾವಣಗೆರೆಯ ಬೆಣ್ಣೆ ದೋಸೆಗಳು ಇದೀಗ ಲಭ್ಯವಾಗುತ್ತಿದೆ.
ಹೌದು,ಕುಮಟಾದ ಅಳ್ವೆಕೋಡಿಯಿಂದ ಮೀನುಮಾರುಕಟ್ಟೆಗೆ /ಕುಮಟಾ ಪಟ್ಟಣವನ್ನು ಪ್ರವೇಶಿಸುವ ಮಾರ್ಗದಲ್ಲಿಯೇ ದಾವಣಗೆರೆ ಸ್ಪೆಷಲ್ ಬೆಣ್ಣೆ ದೋಸೆ ಲಭ್ಯವಿದೆ. H & H AAHARA (ಹೆಚ್ & ಹೆಚ್ ಆಹಾರ) ಅವರು ದಾವಣಗೆರೆ ಸ್ಪೆಷಲ್ ಬೆಣ್ಣೆ ದೋಸೆಯ ಹೋಟೆಲ್ ಅನ್ನು ಸ್ಥಾಪಿಸಿದ್ದು ಸೌದೆ ಒಲೆಯಲ್ಲಿ ಮಾಡಿದ ಸ್ಪೆಷಲ್ ರುಚಿಕರ ದಾವಣಗೆರೆ ಬೆಣ್ಣೆ ದೋಸೆ ಇಲ್ಲಿ ಲಭ್ಯವಿದೆ.
ಮೂಲ ದಾವಣಗೆರೆ ಬೆಣ್ಣೆ ದೋಸೆಯ ರುಚಿಯೇ ಇಲ್ಲಿನ ವಿಶೇಷತೆ. ದಾವಣಗೆರೆಯ ಬೆಣ್ಣೆ ದೋಸೆಯಂತೆ ಅದೇ ಸ್ವಾದ ಹೊಂದಿರುವ ದೋಸೆ ಜೊತೆಗೆ ಅದೇ ಮಾದರಿಯಲ್ಲಿಯೇ ಚಟ್ನಿ ಹಾಗೂ ಅದಕ್ಕೆ ಬೇಕಾದ ಅಗತ್ಯ ಸಹಭೋಜ್ಯ ಬಡಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಕೇವಲ ಬೆಣ್ಣೆ ದೋಸೆ ಅಷ್ಟೇ ಅಲ್ಲದೆ ತಟ್ಟೆ ಇಡ್ಲಿ,ಪಡ್ಡು ,ಟೀ ,ಫಿಲ್ಟರ್ ಕಾಫಿ, ಬಗೆಯ ತಿಂಡಿ ತಿನಿಸುಗಳು ಇಲ್ಲಿ ಲಭ್ಯವಿದೆ.
ಗ್ರಾಹಕರ ಅನುಕೂಲಕ್ಕಾಗಿ ಬಿಸಿ ಬಿಸಿ ಪಾರ್ಸೆಲ್ ವ್ಯವಸ್ಥೆಯೂ ಇರುತ್ತಿದ್ದು,ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಸಿಯಾಗಿಯೇ ಇರುವಂತೆ ಪಾರ್ಸಲ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.
ಆಕರ್ಷಕ ಲೈಟಿಂಗ್ ವ್ಯವಸ್ಥೆ ಹಾಗೂ ಸುಖಾಸನಗಳು, ಫ್ಯಾನ್ ಇತ್ಯಾದಿಗಳ ವ್ಯವಸ್ಥೆಯಿಂದ ಆರಾಮಾಗಿ ಕುಳಿತು ನೀವು ಬೆಣ್ಣೆ ದೋಸೆ ಹಾಗೂ ಇತರ ತಿಂಡಿಯ ಸವಿಯನ್ನು ಸವಿಯಲು ಅನುಕೂಲ ಮಾಡಿಕೊಡಲಾಗಿದೆ.
ಪ್ರತ್ಯೇಕ ಐಸ್ ಕ್ರೀಮ್ ಹಾಗೂ ಫ್ರೆಶ್ ಜ್ಯೂಸ್ ಪಾರ್ಲರ್ ಆರಂಭಿಸಲಾಗಿದ್ದು ಬೆಣ್ಣೆ ದೋಸೆ ಹೊಟೆಲ್ ಪಕ್ಕದಲ್ಲಿಯೇ ಇರುವ ವಿಶಾಲ ಜಾಗದಲ್ಲಿ ಆರಾಮಾಗಿ ಕುಳಿತು ಸ್ನೇಹಿತರ ಜೊತೆ ಐಸ್ ಕ್ರೀಮ್ ಹಾಗೂ ಫ್ರೆಶ್ ಜ್ಯೂಸ್ ಸವಿಯಲು ಸಕಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇಂದೇ ಭೇಟಿ ನೀಡಿ ರುಚಿಯ ಅನುಭವಿಸಿ ತಮ್ಮ ಈ ನೂತನ ಉದ್ದಿಮೆಯನ್ನು ಪ್ರೋತ್ಸಾಹಿಸಿ ಎಂದು H& H Aahar ನ ಉತ್ಸಾಹಿ ತರುಣ ವಿನಾಯಕ ಹೆಬ್ಬಾರ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ಪಾರ್ಸೆಲ್ ಗಳಿಗಾಗಿ ಸಂಪರ್ಕಿಸಿ:- 6366909933