ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ದಿನಕರ ಶೆಟ್ಟಿಯವರು ಇಂದು ಕುಮಟಾ ಪಟ್ಟಣದ ವಿವೇಕನಗರದಲ್ಲಿ (ಬೂತ್ ಸಂಖ್ಯೆ 92) ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.

ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಕ್ಯಾಪ್ಟನ್ ಗಣೇಶ ಕಾರ್ಣಿಕ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಯೋಜನೆಗಳು ನೇರವಾಗಿ ಜನರನ್ನು ತಲುಪುತ್ತಿದೆ. ದೇಶದ ಭದ್ರತೆಯ ಹಾಗೂ ರಕ್ಷಣೆಯ ವಿಷಯದಲ್ಲಿ ಇಂದು ನಮ್ಮ ಭಾರತ ಸದೃಢವಾಗಿದೆ. ನಮ್ಮ ಧರ್ಮ ಹಾಗೂ ಸಂಪ್ರದಾಯಗಳ ರಕ್ಷಣೆಯನ್ನು ಬಿಜೆಪಿಯಲ್ಲದೆ ಇನ್ಯಾವ ರಾಜಕೀಯ ಪಕ್ಷವು ಮಾಡಲಾರದು. ಕೋವಿಡ್ ಹಾಗೂ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ತರುವಾಯ ಜಗತ್ತಿನ ಬಲಿಷ್ಠ ದೇಶಗಳು ಆರ್ಥಿಕವಾಗಿ ತಲೆಕೆಳಗಾಗಿವೆ. ಆದರೆ ಮೋದೀಜಿಯವರ ನೇತೃತ್ವದಲ್ಲಿ ನಮ್ಮ ಕೇಂದ್ರ ಸರ್ಕಾರ ನಮ್ಮ ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದೆ. ನಮ್ಮ ಅಭ್ಯರ್ಥಿ ದಿನಕರ ಶೆಟ್ಟಿಯವರು ಕಳೆದ ಐದುವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಬಿಜೆಪಿಗೆ ಮತನೀಡಬೇಕೆಂದು ವಿನಂತಿಸಿದರು.

RELATED ARTICLES  ದರೋಡೆಗೆ ಹೊಂಚು ಹಾಕಿದ್ದವರ ಬಂಧನ : ಶಿರಸಿ ಪೊಲೀಸರಿಂದ ಕಾರ್ಯಾಚರಣೆ.

ಕುಮಟಾ ಮಂಡಲ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ ಗಾಂವಕರ, ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಗಣೇಶ ಕಾರ್ಣಿಕ್, ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಸಾದ ನಾಯಕ, ಪುರಸಭಾ ಸದಸ್ಯರಾದ ಗೀತಾ ಮುಕ್ರಿ ಹಾಗೂ ಸಂತೋಷ ನಾಯ್ಕ, ಮಂಡಲ ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ, ಬೂತ್ ಅಧ್ಯಕ್ಷ ಬಾಲಚಂದ್ರ ಮಣಕಿಕರ, ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.

RELATED ARTICLES  ಅಂಬುಲೆನ್ಸ ಹಾಗೂ ಕಂಟೇನರ್ ನಡುವೆ ಅಪಘಾತ.