ಕುಮಟಾ : ಇಂದು ಕಾಂಗ್ರೆಸ್ ಪಕ್ಷದವರು ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಅವರ ಪಕ್ಷಕ್ಕೇ ಇಂದು ಗ್ಯಾರಂಟಿ ಇಲ್ಲ, ಹೀಗಿರುವಾಗ ಕಾಂಗ್ರೆಸ್ಸಿಗರು ಕೊಡುವ ಕಾರ್ಡಿಗೆ ಯಾವ ಗ್ಯಾರಂಟಿ ಇದೆ.? ಈ ಚುನಾವಣೆ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವುದಲ್ಲ. ದೇಶಭಕ್ತರು ಹಾಗೂ ದೇಶದ್ರೋಹಿ ಶಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಾಗಿದ್ದು, ಭಯೋತ್ಪಾದಕರನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಾಠಕಲಿಸಬೇಕಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾಪಾರ್ಟಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪರ ಮುಗ್ವಾ ಮಹಾಶಕ್ತಿಕೇಂದ್ರದ ಹಳಗೇರಿ ಹಾಗೂ ಸುಬ್ರಹ್ಮಣ್ಯದಲ್ಲಿ ಚುನಾವಣಾ ಪ್ರಚಾರಸಭೆಯನ್ನು ಕೈಗೊಂಡು ಅವರು ಮಾತನಾಡಿದರು.

ಸುಸ್ಥಿರವಾದಂತಹ ಸಾಮಾಜಿಕ ಜೀವನವನ್ನು ರೂಪಿಸಲು ಭಾರತೀಯ ಜನತಾ ಪಕ್ಷವು ಆಡಳಿತದಲ್ಲಿ ಮುಂದುವರೆಯುವ ಅನಿವಾರ್ಯತೆ ಇದೆ. ಇಡೀ ವಿಶ್ವದಲ್ಲಿ ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿರುವ ಯಾವುದಾದರು ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೆ ಅದು ನಮ್ಮ ಭಾರತದಲ್ಲಿ ಮಾತ್ರ. ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ನಂತರ ತೆಗೆದುಕೊಂಡಂತಹ ದಿಟ್ಟ ನಿಲುವುಗಳು ಇಂದು ನಮ್ಮ ದೇಶದವನ್ನು ಪ್ರಬಲ ರಾಷ್ಟ್ರಗಳಿಗೆ ಸೆಡ್ಡುಹೊಡೆಯುವ ಮಟ್ಟಕ್ಕೆ ಭಾರತವನ್ನು ಕೊಂಡೊಯ್ಯುತ್ತಿದೆ. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿನಕರ ಶೆಟ್ಟಿಯವರಿಗೆ ಎಲ್ಲರೂ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಹೇಳಿದರು.

RELATED ARTICLES  ಕಳೆದುಹೋದ ಬ್ಯಾಗ್ ಪತ್ತೆಹಚ್ಚಿ ಹಿಂತಿರುಗಿಸಿದ ಪೊಲೀಸರು.

ದಿನಕರ ಶೆಟ್ಟಿಯವರು ಮಾತನಾಡಿ ಭರವಸೆಯನ್ನು ಯಾರುಬೇಕಾದರೂ ಕೊಡಬಹುದು. ಆದರೆ ಕೊಟ್ಟ ಭರವಸೆಯನ್ನು ಈಡೇರಿಸುವ ತಾಕತ್ತು ಇರೋದು ಬಿಜೆಪಿಗೆ ಮಾತ್ರ. ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ದಾಖಲೆಯ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ನೀವು ನನ್ನಮೇಲೆ ಇಟ್ಟಿರುವ ಭಾರವಸೆಯನ್ನು ನಾನು ಚಾಚುತಪ್ಪದೆ ಈಡೇರಿಸಿದ್ದೇನೆ. ಹೊನ್ನಾವರದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸರ್ಕಾರಿ ಬಸ್ ನಿಲ್ದಾಣ, ಶರಾವತಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ, ಗ್ರಾಮೀಣ ಹಾಗೂ ಪಟ್ಟಣ ಭಾಗದಲ್ಲಿ ವ್ಯಾಪಕವಾಗಿ ರಸ್ತೆಗಳ ಸುಧಾರಣೆ, ಅಗತ್ಯವಿರುವ ಶಾಲೆಗಳಲ್ಲಿ ವಿವೇಕಶಾಲೆ ಯೋಜನೆಯಡಿಯಲ್ಲಿ ಹೊಸ ವರ್ಗಕೋಣೆಗಳ ನಿರ್ಮಾಣ, ತಾಲೂಕಾಸ್ಪತ್ರೆಯಲ್ಲಿ ಐ. ಸಿ. ಯು. ಮತ್ತು ಡಯಾಲಿಸಿಸ್ ಮಷಿನ್ ಗಳು ಹಾಗೂ ಇತರ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ಮಹತ್ವದ ಕಾರ್ಯಗಳು ಕಳೆದ ಐದು ವರ್ಷಗಳ ಅವಧಿಯಲ್ಲಿ ನೆರವೇರಿವೆ ಎಂದು ಹೇಳಿದರು.

RELATED ARTICLES  ರಾಜ್ಯ ಮಟ್ಟದ ತ್ರಿಶಾ ಸ್ಕಾಲರ್ ಶಿಪ್ ಟೆಸ್ಟ್ : ಸರಸ್ವತಿ ಪಿಯು ಕಾಲೇಜ್ ವಿದ್ಯಾರ್ಥಿಗಳ ಸಾಧನೆ

ಮಂಡಲಾಧ್ಯಕ್ಷ ರಾಜು ಭಂಡಾರಿ, ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಮಹಾಶಕ್ತಿಗೆ ದರದ ಅಧ್ಯಕ್ಷ ರವಿ ಹೆಗಡೆ, ಶಕ್ತಿಕೇಂದ್ರದ ಅಧ್ಯಕ್ಷ ಎಮ್. ಎಸ್. ಹೆಗಡೆ, ಮಂಡಲದ ರೈತಮೋರ್ಚಾ ಸಂಚಾಲಕ ಎನ್. ಎಸ್. ಹೆಗಡೆ, ಸಾಲ್ಕೋಡ್ ಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ್, ಕಡ್ಲೆ ಪಂಚಾಯತ್ ಅಧ್ಯಕ್ಷ ಗೋವಿಂದ ಗೌಡ, ಮುಗ್ವಾ ಪಂಚಾಯತ್ ಸದಸ್ಯರಾದ ಗೋವಿಂದ ಭಟ್, ರಾಮು ಗೌಡ ಹಾಗೂ ಆಶಾ ಹೆಗಡೆ, ಸಾಲ್ಕೋಡ್ ಶಕ್ತಿಕೇಂದ್ರದ ಅಧ್ಯಕ್ಷ ಬಾಲಚಂದ್ರ ನಾಯ್ಕ್, ಬೂತ್ ಕಮಿಟಿ ಅಧ್ಯಕ್ಷರಾದ ರೋಷನ್ ಶಾನಭಾಗ ಮತ್ತು ಗೋವಿಂದ ಗೌಡ, ಬೂತ್ ಕಮಿಟಿ ಸದಸ್ಯರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.