ಕುಮಟಾ : ತಾಲೂಕಿನ ಪುಣ್ಯಕ್ಷೇತ್ರ ಗೋಕರ್ಣದ ಸುತ್ತಲಿನ ಗ್ರಾಮಗಳಾದ ನಾಡುಮಾಸ್ಕೇರಿ, ಅನೇಹಳ್ಳಿ, ಗೋಕರ್ಣ, ರುದ್ರಪಾದ, ಬಾದಿಮನೆ, ಬೆಳೆಗದ್ದೆ, ಬರ್ಗಿ ಪಂಚಾಯತ್ ವ್ಯಾಪ್ತಿಯ ಬರ್ಗಿ, ಹಣಕೋಣ ಹಾಗೂ ಶಶಿಹಿತ್ಲು ಮುಂತಾದ ಪ್ರದೇಶಗಳಿಗೆ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವರವರು ಭೇಟಿನೀಡಿ ಚುನಾವಣಾ ಪ್ರಚಾರ ನಡೆಸಿದರು.

ಈ ವೇಳೆ ಕ್ಷೇತ್ರದ ಮತದಾರರು ತಮಗೆ ಆಶೀರ್ವದಿಸಿ ಶಾಸಕನಾಗಿ ಕೆಲಸ ಮಾಡುವ ಅವಕಾಶ ನೀಡಿದರೆ ಕೇವಲ 6 ತಿಂಗಳುಗಳ ಒಳಗೆ ಕುಮಟಾ ನಗರದಲ್ಲಿ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅನುಮೋದನೆ, ಅನುದಾನ ಪಡೆಯುವ ಜೊತೆಗೆ ಶಂಕುಸ್ಥಾಪನೆ ನೆರವೇರಿಸುವ ಭರವಸೆ ನೀಡಿದರು. 

RELATED ARTICLES  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಚನ್ನಮಲ್ಲ ಸ್ವಾಮಿಗಳು

ಈ ಸಂದರ್ಭದಲ್ಲಿ ನಿವೇದಿತ್ ಅವರ ಧರ್ಮ ಪತ್ನಿ ಶ್ರೀಮತಿ ಮೀರಾ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಾಯಿ ಗಾಂಕರ್, ಬ್ಲಾಕ್ ಅಧ್ಯಕ್ಷರಾದ ಹೊನ್ನಪ್ಪ ಮಡಿವಾಳ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸುರೇಖಾ ವಾರೇಕರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರದೀಪ್ ದೇವರಬಾವಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಗೌಡ, ಪ್ರಮುಖರಾದ ವೆಂಕಟ್ರಮಣ ಪಟಗಾರ್, ವಾಮನ ಪಟಗಾರ್, ಸಬಾರ್ ಸಾಬ್,ಅಬ್ಬಾಸ್ ಸಾಬ್, ಚಿದಂಬರ ಪಟಗಾರ್, ಜಯರಾಮ ನಾಯ್ಕ್ ಉಪಸ್ಥಿತರಿದ್ದರು.

RELATED ARTICLES  ಇಂದಿನ(ದಿ-17/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.