ಕುಮಟಾ : ಶ್ರೀ ವಿಠ್ಠಲ ರುಕುಮಾಯಿ ದೇವಿಯ ಆಶೀರ್ವಾದವನ್ನು ಪಡೆದು ಹೊನ್ನಾವರದ ಪಟ್ಟಣ ವ್ಯಾಪ್ತಿಯ ಅನೇಕ ಸ್ಥಳಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಬಿರುಸಿನ ಪ್ರಚಾರ ನಡೆಸಿದರು. ವಿಶೇಷವಾಗಿ ಮೀನು ಮಾರುಕಟ್ಟೆಗೆ ಭೇಟಿ ನೀಡಿದಾಗ ಮೀನುಗಾರ ಮಹಿಳೆಯರ ಆಕ್ರಂದನ ಮುಗಿಲೇರಿತ್ತು . ಆ ಸಮಯದಲ್ಲಿ ಜನರ ಆಶೀರ್ವಾದ ಪಡೆದ ಸೋನಿ, ಶಾಸಕನಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಹೊನ್ನಾವರಕ್ಕೆ ವಿಶೇಷವಾಗಿ ಒಂದು ಸುಸಜ್ಜಿತ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.