ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಹೊನ್ನಾವರ ತಾಲೂಕಿನ ಶಿರೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಕೈಗೊಂಡರು.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಸಂಚಾಲಕರಾದ ಎಮ್. ಜಿ. ಭಟ್ ಅವರು ಮಾತನಾಡಿ, ನಮ್ಮ ಕ್ಷೇತ್ರದ ಶಾಸಕರಾಗಿರುವ ದಿನಕರ ಶೆಟ್ಟಿಯವರು ಇತರೆಲ್ಲಾ ಜನಪ್ರತಿನಿಧಿಗಳಿಗಿಂತ ವಿಭಿನ್ನವಾಗಿರುವ ವ್ಯಕ್ತಿಯಾಗಿದ್ದಾರೆ. ಮತದಾರರ ದೂರವಾಣಿ ಕರೆಗಳನ್ನು ಖುದ್ದಾಗಿ ಸ್ವೀಕರಿಸುವ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಅವರ ಸರಳತೆ ಹಾಗೂ ಸಜ್ಜನಿಕೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ನೆರವೇರಿದ ಹಲವಾರು ಅಭಿವೃದ್ಧಿ ಕಾರ್ಯಗಳು ಒಂದುಭಾಗವಾದರೆ, ಕಾನೂನು ಸುವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದು ದಿನಕರ ಶೆಟ್ಟಿಯವರ ಇನ್ನೊಂದು ಸಾಧನೆ. ಎಲ್ಲಿಯೂ ಗೂಂಡಾಗಿರಿಗೆ ಆಸ್ಪದಕೊಡದೆ ಶಾಂತಿಯುತವಾದ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅಭಿವೃದ್ಧಿಯ ಪರ್ವ ಮುಂದುವರೆಯಲು ಹಾಗೂ ಪ್ರಜೆಗಳೆಲ್ಲರು ನೆಮ್ಮದಿಯ ಜೀವನವನ್ನು ಜೀವಿಸಲು ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರಿಗೆ ಎಲ್ಲರೂ ಬೆಂಬಲಿಸುವ ಮುಖೇನ ಮತ್ತೊಮ್ಮೆ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಬೇಕಿದೆ ಎಂದು ಹೇಳಿದರು.

RELATED ARTICLES  ಕುಮಟಾದಲ್ಲಿ ಅಖಂಡ ಭಾರತ ಸಂಕಲ್ಪ ದಿನ

ಹೊನ್ನಾವರ ಮಂಡಲ ಬಿಜೆಪಿ ಅಧ್ಯಕ್ಷ ರಾಜು ಭಂಡಾರಿ, ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಎಮ್. ಜಿ. ಭಟ್, ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿ ಹೆಗಡೆ ಕಡ್ಲೆ, ಶಕ್ತಿಕೇಂದ್ರದ ಪ್ರಮುಖ್ ಎಮ್. ಎಸ್. ನಾಯ್ಕ ಮತ್ತು ಮಂಜು ಮಡಿವಾಳ, ಚಂದಾವರ ಗ್ರಾಮಪಂಚಾಯತ್ ಅಧ್ಯಕ್ಷೆ ಛಾಯಾ ಉಭಯಕರ್, ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಗೋವಿಂದ ಗೌಡ, ಚಂದಾವರ ಗ್ರಾಮಪಂಚಾಯತ್ ಸದಸ್ಯರಾದ ಪ್ರೇಮಾ ಮೋಹನ ನಾಯ್ಕ, ಮಂಜುನಾಥ ಮಡಿವಾಳ, ಮಲ್ಲಿಕಾ ಭಂಡಾರಿ, ಗಣಪಿ ಮುಕ್ರಿ ಹಾಗೂ ಅಶ್ವಿನಿ ನಾಯ್ಕ, ಬೂತ್ ಕಮಿಟಿ ಅಧ್ಯಕ್ಷ ರಿತೇಶ್ ಉಪೇಂದ್ರ ನಾಯ್ಕ, ಊರಿನ ಪ್ರಮುಖರಾದ ಗುರು ಐಗಳ, ಮೋಹನ ವಿ. ನಾಯ್ಕ, ಚಂದ್ರು ನಾಯ್ಕ, ಮಂಜುನಾಥ್ ಗೌಡ, ಕಮಲಾಕರ ನಾಯ್ಕ, ಮಾದು ಗೌಡ, ಗಿರೀಶ ಅಣ್ಣಪ್ಪ ನಾಯ್ಕ, ಬೂತ್ ಕಮಿಟಿ ಸದಸ್ಯರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES  ವೈನ್ ಶಾಪ್ ಗೆ ಕನ್ನ ಹಾಕಿದ ಕಳ್ಳರು : ಲಾಕ್ ಡೌನ್ ಸಮಯದಲ್ಲಿಯೇ ವ್ಯಸನಿಗಳ ಕರಾಮತ್ತು?